ಏಕದಿನ ವಿಶ್ವಕಪ್ 2023: ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿ ಶುಭಾರಂಭ ಮಾಡಿದ ನ್ಯೂಜಿಲ್ಯಾಂಡ್!

ಐಸಿಸಿ ಏಕದಿನ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ನ್ಯೂಜಿಲೆಂಡ್ ಮಣಿಸಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ನ್ಯೂಜಿಲ್ಯಾಂಡ್ ತಂಡ
ನ್ಯೂಜಿಲ್ಯಾಂಡ್ ತಂಡ

ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ನ್ಯೂಜಿಲೆಂಡ್ ಮಣಿಸಿ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದೆ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಸ್ಪರ್ಧಾತ್ಮಕ ರನ್ ಪೇರಿಸಿತು. ಇಂಗ್ಲೆಂಡ್ ನಿಗಿದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 282 ಪೇರಿಸಿದೆ. 

ಇಂಗ್ಲೆಂಡ್ ಪರ ಜಾನಿ ಬೈರ್ಸ್ಟೋವ್ 33, ಜೋ ರೂಟ್ 77, ಹಾರಿ ಬ್ರೋಕ್ 25, ಜೋಸ್ ಬಟ್ಲರ್ 43 ರನ್ ಪೇರಿಸಿದ್ದಾರೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಮಾಟ್ ಹೆನ್ರಿ 3, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೇನ್ ಫಿಲಿಪ್ಸ್ ತಲಾ 2 ವಿಕೆಟ್ ಪಡೆದಿದ್ದಾರೆ.

ಇಂಗ್ಲೆಂಡ್ ನೀಡಿದ 283 ರನ್ ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 36.2 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿ ಭರ್ಜರಿ ಗೆಲುವು ಸಾಧಿಸಿತು. ನ್ಯೂಜಿಲ್ಯಾಂಡ್ ಪರ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಸ್ಫೋಟಕ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 

ಡೆವೋನ್ ಕಾನ್ವೇ 121 ಎಸೆತಗಳಲ್ಲಿ 3 ಸಿಕ್ಸರ್ 19 ಬೌಂಡರಿ ಸೇರಿದಂತೆ ಅಜೇಯ 152 ರನ್ ಪೇರಿಸಿದ್ದರೆ ರಚಿನ್ ರವೀಂದ್ರ 96 ಎಸೆತಗಳಲ್ಲಿ 5 ಸಿಕ್ಸರ್ 11 ಬೌಂಡರಿ ಸೇರಿದಂತೆ ಅಜೇಯ 123 ರನ್ ಪೇರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com