ಶ್ರೀಲಂಕಾ ತಂಡ
ಕ್ರಿಕೆಟ್
ಐಸಿಸಿ ವಿಶ್ವಕಪ್ 2023: ನೆದರ್ಲ್ಯಾಂಡ್ ವಿರುದ್ಧ ಜಯ; ಸತತ 3 ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವು ಸಾಧಿಸಿದ ಶ್ರೀಲಂಕಾ
ಐಸಿಸಿ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಶ್ರೀಲಂಕಾ ಸತತ ಮೂರು ಪಂದ್ಯಗಳ ಸೋಲಿನ ಬಳಿಕ ನೆದರ್ಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿದೆ.
ಲಖನೌ: ಐಸಿಸಿ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ ಶ್ರೀಲಂಕಾ ಸತತ ಮೂರು ಪಂದ್ಯಗಳ ಸೋಲಿನ ಬಳಿಕ ನೆದರ್ಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿದೆ.
ಲಖನೌನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನೆದರ್ಲ್ಯಾಂಡ್ ತಂಡ ನಿಗದಿತ ಓವರ್ ನಲ್ಲಿ 262 ರನ್ ಗಳಿಗೆ ಆಲೌಟ್ ಆಯಿತು. ನೆದರ್ಲ್ಯಾಂಡ್ ನೀಡಿದ 263 ರನ್ ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ 48 ಓವರ್ ನಲ್ಲಿ 263 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.
ನೆದರ್ಲ್ಯಾಂಡ್ ಪರ ಕಾಲಿನ್ ಅಕರ್ಮನ್ 29, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 70 ಹಾಗೂ ಲೋಗನ್ ವ್ಯಾನ್ ಬೀಕ್ 59 ರನ್ ಬಾರಿಸುವ ಮೂಲಕ ತಂಡ 250 ಗಡಿ ದಾಟಲು ನೆರವಾದರು. ಲಂಕಾ ಪರ ಬೌಲಿಂಗ್ ನಲ್ಲಿ ದಿಲ್ಶಾನ್ ಮದುಶಂಕ ಮತ್ತು ಕಸೂನ್ ರಜಿತಾ ತಲಾ 4 ವಿಕೆಟ್ ಪಡೆದಿದ್ದಾರೆ.
ಲಂಕಾ ಪರ ಪತುಮ್ ನಿಸಂಕಾ 54, ಸದೀರ ಸಮರವಿಕ್ರಮ ಅಜೇಯ 91, ಚರಿತಾ ಅಸಲಂಕಾ 44 ಮತ್ತು ಧನಂಜಯ್ ಡಿಸಿಲ್ವಾ 30 ರನ್ ಬಾರಿಸಿದ್ದಾರೆ. ನೆದರ್ಲ್ಯಾಂಡ್ ಪರ ಆರ್ಯನ್ ದತ್ 3 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ