ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಮೋಲ್ ಮಜುಂದಾರ್ ನೇಮಕ!

ಮುಂಬೈನ ಮಾಜಿ ನಾಯಕ ಮತ್ತು ದೇಶೀಯ ಆಟಗಾರ ಅಮೋಲ್ ಮಜುಂದಾರ್ ಅವರನ್ನು  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬುಧವಾರ ನೇಮಿಸಲಾಗಿದೆ.
ಅಮೋಲ್ ಮಜುಂದಾರ್
ಅಮೋಲ್ ಮಜುಂದಾರ್

ಮುಂಬೈ: ಮುಂಬೈನ ಮಾಜಿ ನಾಯಕ ಮತ್ತು ದೇಶೀಯ ಆಟಗಾರ ಅಮೋಲ್ ಮಜುಂದಾರ್ ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬುಧವಾರ ನೇಮಿಸಲಾಗಿದೆ. ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕೆಲವು ತಿಂಗಳ ಹಿಂದೆ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶಿಸಿತ್ತು.

ಈ ಹುದ್ದೆಗೆ ಮಜುಂದಾರ್ ಅವರನ್ನು ಆಯ್ಕೆ ಮಾಡಲಾಗಿತ್ತಾದರೂ ನೇಮಕಾತಿಗೆ ಧೀರ್ಘ ಕಾಲ ತೆಗೆದುಕೊಳ್ಳಲಾಗಿತ್ತು. ಸಂಪೂರ್ಣ ಸಮಾಲೋಚನೆ ನಂತರ ಮೂವರು ಸದಸ್ಯರ ಸಮಿತಿಯು ಅಮೋಲ್ ಮಜುಂದಾರ್ ಅವರನ್ನು ಹುದ್ದೆ ವಹಿಸಿಕೊಳ್ಳುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ರಮೇಶ್ ಪೊವಾರ್ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಬೆಂಗಳೂರು ಕೇಂದ್ರಕ್ಕೆ ಸ್ಥಳಾಂತರಗೊಂಡ ನಂತರ ಭಾರತದ ಮಾಜಿ ಬ್ಯಾಟರ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಿಬ್ಬಂದಿ ಹೃಷಿಕೇಶ್ ಕಾನಿಟ್ಕರ್ ಹಂಗಾಮಿ ಮುಖ್ಯ ಕೋಚ್ ಹೊಣೆ ಹೊತ್ತಿದ್ದರು.

ಮಜುಂದಾರ್ ತಮ್ಮ 21 ವರ್ಷಗಳ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 171 ಪಂದ್ಯಗಳಲ್ಲಿ 30 ಶತಕ ಒಳಗೊಂಡಂತೆ 11,000 ಕ್ಕೂ ಹೆಚ್ಚು  ರನ್ ಗಳಿಸಿದ್ದಾರೆ.100 ಕ್ಕೂ ಹೆಚ್ಚು ಪ್ರಥಮ ದರ್ಜೆ  ಮತ್ತು 14 ಟಿ-20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಜುಂದಾರ್ ಅವರ ಆಧುನಿಕ ಕ್ರಿಕೆಟ್‌ ಜ್ಞಾನವನ್ನು ಪರಿಗಣಿಸಿ  ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಲಾಗಿದೆ  ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com