ವಿಶ್ವಕಪ್-2023: ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನಕ್ಕೆ 7 ವಿಕೆಟ್ ಗಳ ಜಯ, ಸೆಮಿ ಫೈನಲ್ಸ್ ಆಸೆ ಜೀವಂತ

ಪುಣೆಯಲ್ಲಿ ನಡೆದ ಒಡಿಐ ವಿಶ್ವಕಪ್-2023ರ ಪಂದ್ಯದಲ್ಲಿ ಲಂಕಾ ವಿರುದ್ಧ ಆಫ್ಘಾನಿಸ್ತಾನ 7 ವಿಕೆಟ್ ಗಳ ಜಯ ಗಳಿಸಿದೆ.
ಅಫ್ಘಾನಿಸ್ತಾನ ತಂಡ (ಸಂಗ್ರಹ ಚಿತ್ರ)
ಅಫ್ಘಾನಿಸ್ತಾನ ತಂಡ (ಸಂಗ್ರಹ ಚಿತ್ರ)

ಪುಣೆ: ಪುಣೆಯಲ್ಲಿ ನಡೆದ ಒಡಿಐ ವಿಶ್ವಕಪ್-2023ರ ಪಂದ್ಯದಲ್ಲಿ ಲಂಕಾ ವಿರುದ್ಧ ಆಫ್ಘಾನಿಸ್ತಾನ 7 ವಿಕೆಟ್ ಗಳ ಜಯ ಗಳಿಸಿದೆ.
 
ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್ ಟೂರ್ನಿ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೇರಿದ್ದು, ಶ್ರೀಲಂಕಾಗೆ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
 
ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ಲಂಕಾ ತಂಡವನ್ನು 50 ಓವರ್ ಗಳಿಗೆ ಇನ್ನೂ 3 ಎಸೆತ ಬಾಕಿ ಇರುವಾಗಲೇ 241  ಸಾಧಾರಣ ಮೊತ್ತಕ್ಕ ಕಟ್ಟಿ ಹಾಕಿತ್ತು. 

ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಜ್, 4 ಎಸೆತ ಎದುರಿಸಿ ವಿಕೆಟ್ ಒಪ್ಪಿಸುವ ಮೂಲಕ ಅಫ್ಘಾನಿಸ್ತಾನ ತಂಡಕ್ಕೆ ಆರಂಭಿಕ ಅಘಾತ ಎದುರಾಗಿತ್ತು. ಆದರೆ ಇಬ್ರಾಹಿಂ ಝದ್ರನ್ (57 ಎಸೆತಗಳಲ್ಲಿ 39 ರನ್) ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಬಳಿಕ ಕ್ರೀಸ್ ಗೆ ಬಂದ ರೆಹಮತ್ ಶಾ 74 ಎಸೆತಗಳಲ್ಲಿ 62 ರನ್ ಗಳಿಸಿದರೆ, ಹಶ್ಮತುಲ್ಲಾ ಶಾಹಿದಿ 74 ಎಸೆತಗಳಲ್ಲಿ 58 ರನ್, ಅಜ್ಮತುಲ್ಲಾ ಒಮರ್ಜಾಯ್ 63 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ತಂಡ ಗೆಲ್ಲಲು ನೆರವಾದರು 

ಲಂಕಾ ಪರ ದಿಲ್ಶನ್ ಮದುಶಂಕ 48 ರನ್ ನೀಡಿ 2 ವಿಕೆಟ್ ಪಡೆದರೆ, ಕಸುನ್ ರಜಿತಾ 48 ರನ್ ನೀಡಿ 1 ವಿಕೆಟ್ ಪಡೆದರು.
 
ಲಂಕಾ ತಂಡ ಈ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ ಕುಸಿದಿದ್ದು, ಇನ್ನೊಂದು ಪಂದ್ಯದಲ್ಲಿ ಸೋತರೆ ವಿಶ್ವಕಪ್ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ದಟ್ಟವಾಗಿದ್ದರೆ, ಅಫ್ಘಾನಿಸ್ಥಾನದ ಸೆಮಿಫೈನಲ್ಸ್ ಸಾಧ್ಯತೆ ಜೀವಂತವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com