ಐಸಿಸಿ ವಿಶ್ವಕಪ್ 2023: ಲಂಕಾ ವಿರುದ್ಧದ ಪಂದ್ಯ, ಟಾಸ್ ಗೆದ್ದ ಅಪ್ಘಾನಿಸ್ತಾನ ಬೌಲಿಂಗ್ ಆಯ್ಕೆ

ಐಸಿಸಿ ವಿಶ್ವಕಪ್ 2023ರ 30ನೇ ಪಂದ್ಯ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಅಪ್ಘಾನಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ. ಸೆಮಿಫೈನಲ್ ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ.
ಅಪ್ಘಾನಿಸ್ತಾನ, ಶ್ರೀಲಂಕಾ ತಂಡದ ನಾಯಕರ ಸಾಂದರ್ಭಿಕ ಚಿತ್ರ
ಅಪ್ಘಾನಿಸ್ತಾನ, ಶ್ರೀಲಂಕಾ ತಂಡದ ನಾಯಕರ ಸಾಂದರ್ಭಿಕ ಚಿತ್ರ

ಪುಣೆ: ಐಸಿಸಿ ವಿಶ್ವಕಪ್ 2023ರ 30ನೇ ಪಂದ್ಯ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಅಪ್ಘಾನಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ. ಸೆಮಿಫೈನಲ್ ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ.

ಟಾಸ್ ಗೆದ್ದಿರುವ ಅಪ್ಘಾನಿಸ್ತಾನ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಅಪ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸುವ ಕನಸಿನೊಂದಿಗೆ ಕಣಕ್ಕಿಳಿದಿದೆ.

ಮತ್ತೊಂದೆಡೆ ಅನುಭವಿ ಏಂಜೆಲೊ ಮ್ಯಾಥ್ಯೂಸ್ ತಂಡಕ್ಕೆ ಮರಳುವುದರೊಂದಿಗೆ ಶ್ರೀಲಂಕಾ ತಂಡದ ಬೌಲಿಂಗ್ ಬಲ ಹೆಚ್ಚಿದಂತಾಗಿದ್ದು, ಸೆಮಿಫೈನಲ್ ಪ್ರವೇಶದ ಕನಸಿನೊಂದಿಗೆ ಹೋರಾಟ ನಡೆಸಲು ಸಜ್ಜಾಗಿದೆ.

ಶ್ರಿಲಂಕಾ ತಂಡ ಇಂತಿದೆ: ಕುಸಲ ಮೆಂಡಿಸ್ (ನಾಯಕ) ಕುಸಲ ಪೆರೆರಾ, ಪಥುಮ್ ನಿಸಾಂಕ, ದುಷ್ಮಂತಾ ಚಾಮೀರಾ, ದಿಮುತ ಕರುಣಾರತ್ನೆ, ಸದೀರಾ ಸಮರ ವಿಕ್ರಮ, ಚರಿತ ಅಸಲಂಕಾ, ಧನಂಜಯ ಡಿಸಿಲ್ವಾ, ಮಹೀಷ ತೀಕ್ಷಣ, ದುನಿತ್ ವೆಲಾಳಗೆ, ಕಸುನ್ ರಜಿತಾ, ಏಂಜೆಲೊ ಮ್ಯಾಥ್ಯೂಸ್, ದಿಲ್ಯಾನ್ ಮಧುಶಂಕಾ, ದುಶಾನ್ ಹೇಮಂತ, ಚಾಮಿಕಾ ಕರುಣರತ್ನೆ.

ಅಪ್ಘಾನಿಸ್ತಾನ ತಂಡ ಇಂತಿದೆ: ಹಷ್ಮುತ್ ವುಲ್ಲಾ ಶಹೀದಿ (ನಾಯಕ) ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್) ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತಾ ಶಾ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಕಿಲ್, ಅಜ್ಮಿತ್ ವುಲ್ಲಾ ಒಮರ್ ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಖಾನ್, ನೂರು ಅಹಮದ್, ಫಜಲ್ ಹಕ್, ಫಾರೂಕಿ, ಅಬ್ದುಲ್ ರೆಹಮಾನ್, ನವೀಲ್ ಉಲ್ ಹಕ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com