ಐಸಿಸಿ ವಿಶ್ವ ಕಪ್ 2023: ತಂಡಗಳು, ಸಮಯ, ಸ್ಥಳದ ಸಂಪೂರ್ಣ ವೇಳಾಪಟ್ಟಿ ಇಂತಿದೆ...

ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್​ 2023 ಟೂರ್ನಿಯಲ್ಲಿ ಮುಖಾಮುಖಿಯಾಗಲಿರುವ ತಂಡಗಳು, ಸಮಯ ಹಾಗೂ ಸ್ಥಳದ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ.
ವಿಶ್ವಕಪ್ 2023 ಟ್ರೋಫಿ
ವಿಶ್ವಕಪ್ 2023 ಟ್ರೋಫಿ

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್​ 2023 ಟೂರ್ನಿಯಲ್ಲಿ ಮುಖಾಮುಖಿಯಾಗಲಿರುವ ತಂಡಗಳು, ಸಮಯ ಹಾಗೂ ಸ್ಥಳದ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದ್ದು,  ಅಕ್ಟೋಬರ್ 5 ರ ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ನಡುವಿನ ಉದ್ಘಟನಾ ಪಂದ್ಯದೊಂದಿಗೆ ವಿಶ್ವಕಪ್ ಆರಂಭವಾಗಲಿದೆ.

ಭಾರತವು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಅಕ್ಟೋಬರ್ 8 ರಂದು ಆಡಲಿದೆ. ಸಾಂಪ್ರದಾಯಿಕ ಎದುರಾಗಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 14 ರ ಶನಿವಾರದಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. 

ಈ ವರ್ಷವೂ 10 ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿವೆ. 2019ರ ಟೂರ್ನಿಂತೆ ಈ ಬಾರಿಯೂ ಒಟ್ಟಾರೆಯಾಗಿ 48 ಪಂದ್ಯಗಳನ್ನು ಆಡಲಾಗುತ್ತದೆ, ರೌಂಡ್-ರಾಬಿನ್ ಹಂತದ ನಂತರ ನಾಕೌಟ್ ಸುತ್ತುಗಳು ನಡೆಯಲಿವೆ. ಎಲ್ಲಾ 10 ತಂಡಗಳು ರೌಂಡ್-ರಾಬಿನ್ ಹಂತದಲ್ಲಿ ಒಮ್ಮೆ ಪರಸ್ಪರ ಮುಖಾಮುಖಿಯಾಗುತ್ತವೆ, ಒಂದು ಗೆಲುವಿನೊಂದಿಗೆ ತಂಡವು ಪ್ರತಿ ಪಂದ್ಯದಲ್ಲಿ ಎರಡು ಅಂಕಗಳನ್ನು ಗಳಿಸುತ್ತದೆ. 

45 ಪಂದ್ಯಗಳಿಗೆ ಸಾಕ್ಷಿಯಾಗಲಿರುವ ರೌಂಡ್-ರಾಬಿನ್ ಹಂತವು ಪೂರ್ಣಗೊಂಡ ನಂತರ, ಲೀಗ್ ಹಂತದಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದ್ದು, ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ಫೈನಲ್ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com