ಐಪಿಎಲ್ 2023: ಲಕ್ನೋ ವಿರುದ್ಧ ಪಂಜಾಬ್ಗೆ ಎರಡು ವಿಕೆಟ್ ಗಳ ರೋಚಕ ಜಯ
ಲಖನೌ: ಲಖನೌನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಶನಿವಾರ ನಡೆದ ಐಪಿಎಲ್ನ 21ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಎರಡು ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಸೋತರು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ತಂಡ ನಾಯಕ ರಾಹುಲ್ ಅವರ ಅರ್ಧಶತಕದ ನೆರವಿನಿಂದ ನಿಗಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಗೆಲುವಿಗೆ 160 ರನ್ ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, 19.3 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ 2 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿತು.
ಪಂಜಾಬ್ ಪರ ಸಿಕಂದರ್ ರಜಾ ಏಕಾಂಗಿ ಹೋರಾಟ ನಡೆಸಿದರು. ಸಿಕಂದರ್ ರಜಾ 41 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೊರ್ ಮೂಲಕ 57 ರನ್ ಗಳಿಸಿದರು.
ಲಕ್ನೋ ಪರ ಕೆಎಲ್ ರಾಹುಲ್ 56 ಎಸೆತದಲ್ಲಿ 1 ಸಿಕ್ಸ್ ಮತ್ತು 8 ಪೋರ್ ಮೂಲಕ 74 ರನ್ ಗಳಿಸಿದರು. ಉಳಿದಂತೆ ಲಕ್ನೋ ಪರ, ಕೈಲ್ ಮೇಯರ್ಸ್ 29 ರನ್, ದೀಪಕ್ ಹೂಡಾ 2 ರನ್, ಕೃನಾಲ್ ಪಾಂಡ್ಯ 18 ರನ್, ಮಾರ್ಕಸ್ ಸ್ಟೋನಿಸ್ 15 ರನ್, ನಿಕೋಲಸ್ ಪೂರನ್ ಶೂನ್ಯ, ಆಯುಷ್ ಬಡೋನಿ 5 ರನ್, ರವಿ ಬಿಷ್ಣೋಯ್ 3 ರನ್ ಗಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ