ಖ್ವೆಟ್ಟಾದಲ್ಲಿ ಸ್ಫೋಟ: ಸುರಕ್ಷಿತ ಸ್ಥಳಕ್ಕೆ ಪಾಕ್ ಕ್ರಿಕೆಟಿಗರ ಸ್ಥಳಾಂತರ
ಪಾಕ್ ಆಟಗಾರರು ಆಡುತ್ತಿದ್ದ ಮೈದಾನದ ಕೆಲವು ಮೈಲುಗಳ ಅಂತರದಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ನಾಯಕ ನಾಯಕ ಬಾಬರ್ ಅಜಮ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಟಾಪ್ ಆಟಗಾರರನ್ನು ಭಾನುವಾರ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.
Published: 05th February 2023 05:01 PM | Last Updated: 06th February 2023 03:01 PM | A+A A-

ಪಾಕ್ ಕ್ರಿಕೆಟ್ ಆಟಗಾರರು ಸಾಂದರ್ಭಿಕ ಚಿತ್ರ
ಖ್ವೆಟ್ಟಾ: ಪಾಕ್ ಆಟಗಾರರು ಆಡುತ್ತಿದ್ದ ಮೈದಾನದ ಕೆಲವು ಮೈಲುಗಳ ಅಂತರದಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ನಾಯಕ ನಾಯಕ ಬಾಬರ್ ಅಜಮ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಟಾಪ್ ಆಟಗಾರರನ್ನು ಭಾನುವಾರ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.
ಪೊಲೀಸ್ ಲೈನ್ಸ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ ನಂತರ ನವಾಬ್ ಅಕ್ಬರ್ ಬುಗ್ತಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯವನ್ನು ಸ್ವಲ್ಪ ಸಮಯದವರೆಗೂ ಸ್ಥಗಿತಗೊಳಿಸಲಾಯಿತು. ಈ ಸ್ಛೋಟದಲ್ಲಿ ಐವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಸ್ಫೋಟದಲ್ಲಿ ಭದ್ರತಾ ಅಧಿಕಾರಿಗಳನ್ನು ಗುರಿಯಾಗಿಸಲಾಗಿತ್ತು ಎಂದು ಅದು ಹೇಳಿದೆ. ಸ್ಫೋಟ ಸಂಭವಿಸಿದ ತಕ್ಷಣ, ಮುಂಜಾಗ್ರತಾ ಕ್ರಮವಾಗಿ, ಪಂದ್ಯವನ್ನು ನಿಲ್ಲಿಸಲಾಯಿತು ಮತ್ತು ಆಟಗಾರರನ್ನು ಸ್ವಲ್ಪ ಸಮಯದವರೆಗೆ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ನಂತರ, ಗ್ರೀನ್ ಸಿಗ್ನಲ್ ನಂತರ, ಪಂದ್ಯವು ಪುನರಾರಂಭವಾಯಿತು" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ