ಹರ್ಮನ್ ಪ್ರೀತ್ ಐಸಿಸಿಯ ಮಹಿಳಾ ಒಡಿಐ ವರ್ಷದ ತಂಡದ ನಾಯಕಿ

ಐಸಿಸಿಯ ಮಹಿಳಾ ಒಡಿಐ ವರ್ಷದ ತಂಡ-2022 ರ ನಾಯಕಿಯನ್ನಾಗಿ ಭಾರತೀಯ ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್ ಪ್ರೀತ್ ಕೌರ್ ನ್ನು ಐಸಿಸಿ ಹೆಸರಿಸಿದೆ.
ಹರ್ಮನ್ ಪ್ರೀತ್ ಕೌರ್
ಹರ್ಮನ್ ಪ್ರೀತ್ ಕೌರ್

ನವದೆಹಲಿ: ಐಸಿಸಿಯ ಮಹಿಳಾ ಒಡಿಐ ವರ್ಷದ ತಂಡ-2022 ರ ನಾಯಕಿಯನ್ನಾಗಿ ಭಾರತೀಯ ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್ ಪ್ರೀತ್ ಕೌರ್ ನ್ನು ಐಸಿಸಿ ಹೆಸರಿಸಿದೆ.
 
ವರ್ಷದ ತಂಡ-2022 ರಲ್ಲಿ ಹರ್ಮನ್ ಪ್ರೀತ್ ಕೌರ್ ಅವರೊಂದಿಗೆ ಅವರ ಸಹ ಆಟಗಾರರಾದ ಸ್ಮೃತಿ ಮಂಧನ ವೇಗಿ ರೇಣುಕಾ ಸಿಂಗ್ ಅವರುಗಳೂ ಸ್ಥಾನ ಗಿಟ್ಟಿಸಿದ್ದಾರೆ.
 
ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್, ಇಂಗ್ಲೆಂಡ್ ನ ನ್ಯಾಟ್ ಸಿವರ್, ಆಸ್ಟ್ರೇಲಿಯಾದ ಬೆತ್ ಮೂನಿ, ನ್ಯೂಜಿಲ್ಯಾಂಡ್ ನ ಅಮೆಲಿಯಾ ಕೆರ್, ಇಂಗ್ಲೇಂಡ್ ನ ಸೋಫಿ ಎಕ್ಲೆಸ್ಟೋನ್, ದಕ್ಷಿಣ ಆಫ್ರಿಕಾದ ಅಯಬೊಂಗ ಖಾಕಾ, ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಐಸಿಸಿ ಮಹಿಳೆಯರ ಟಿ20ಐ ಟೀಮ್ ಆಫ್ ದಿ ಇಯರ್-2022 ಗೆ ಹೆಸರಿಸಿರುವ ಕ್ರಿಕೆಟಿಗರಾಗಿದ್ದಾರೆ.

2022 ರಲ್ಲಿ ಸ್ಮೃತಿ ಮಂಧನ ಕ್ರೀಡಾ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದರು ಹಾಗೂ ಒಂದು ಸೆಂಚುರಿ- 6 ಅರ್ಧ ಶತಕಗಳನ್ನು ದಾಖಲಿಸಿದ್ದರು. ನ್ಯೂಜಿಲ್ಯಾಂಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಸ್ಮೃತಿ ಮಂಧನ ವೆಸ್ಟ್ ಇಂಡೀಸ್ ವಿರುದ್ಧ 123 ರನ್ ಗಳಿಸಿದ್ದರು.

ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ 91 ರನ್ ಗಳಿಸಿದ್ದರು. ಇನ್ನು ಅನುಭವಿ ಆಲ್ ರೌಂಡರ್ ಆಗಿರುವ ಹರ್ಮನ್ ಪ್ರೀತ್ ಕೌರ್ ಕ್ರಿಕೆಟ್ ಜಗತ್ತಿನಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಆಟಗಾರರಾಗಿದ್ದಾರೆ. 2022 ರಲ್ಲಿ ಐದು ಅರ್ಧ ಶತಕ ಹಾಗೂ ಎರಡು ಶತಕ ದಾಖಲಿಸಿ ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 143 ರನ್ ಗಳಿಸಿರುವುದು ಅತ್ಯುತ್ತಮ ಸ್ಕೋರ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com