ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಆಸ್ಟ್ರೇಲಿಯಾ ಗೆಲ್ಲುವ ಫೇವರಿಟ್ ತಂಡ- ರಿಕಿ ಪಾಟಿಂಗ್

ಲಂಡನ್ ನ ಓವೆಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 7 ರಿಂದ ಪ್ರಾರಂಭವಾಗಲಿರುವ ಭಾರತದ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ  ಗೆಲ್ಲುವ 'ತುಸು ಫೇವರಿಟ್' ತಂಡವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡದ ಸಾಂದರ್ಭಿಕ ಚಿತ್ರ
ಆಸ್ಟ್ರೇಲಿಯಾ ತಂಡದ ಸಾಂದರ್ಭಿಕ ಚಿತ್ರ

ಲಂಡನ್: ಲಂಡನ್ ನ ಓವೆಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 7 ರಿಂದ ಪ್ರಾರಂಭವಾಗಲಿರುವ ಭಾರತದ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಗೆಲ್ಲುವ 'ತುಸು ಫೇವರಿಟ್' ತಂಡವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ ಹೇಳಿದ್ದಾರೆ.

ಭಾರತಕ್ಕೆ ಹೋಲಿಸಿದರೆ ಓವಲ್‌ನಲ್ಲಿನ ಪರಿಸ್ಥಿತಿಗಳು ಆಸ್ಟ್ರೇಲಿಯಾಕ್ಕೆ ಹೆಚ್ಚು ಸೂಕ್ತವಾಗಿವೆ. ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ಆಟಗಾರರು ಹೆಚ್ಚಿನ ಪಂದ್ಯಗಳನಾಡಿಲ್ಲ, ಆದರೆ ಇತ್ತೀಚಿಗೆ ಮುಗಿದ ಐಪಿಎಲ್ 2023ರಲ್ಲಿ ಭಾರತೀಯ ಆಟಗಾರರು ಪಾಲ್ಗೊಂಡಿದ್ದರಿಂದ ಅವರಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗಿಲ್ಲ. ಇದೂ ಕೂಡಾ ಪಂದ್ಯದ ಫಲಿತಾಂಶವನ್ನು ನಿರ್ಧರಿಸಬಹುದು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ತಿಳಿಸಿದರು. 

ಗಾಯಗೊಂಡಿರುವ ಜೋಶ್ ಹೇಜಲ್‌ವುಡ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ವೇಗಿ ಮೈಕಲ್ ನೆಸರ್  ಬದಲಿಗೆ ನಮ್ಮ ಅತ್ಯುತ್ತಮ ಬೌಲರ್ ಬೋಲ್ಯಾಂಡ್ ಆಡಿಸಬೇಕು ಎಂದು ಹೇಳಿದ ಅವರು, ಭಾರತೀಯ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ಯುಗದ  ಸೂಪರ್‌ಸ್ಟಾರ್ ಆಟಗಾರರ "ಪ್ಯಾಕ್ ಆಫ್ ದಿ ಪ್ಯಾಕ್" ಎಂದು ಕರೆದರು ಜಾಕ್ವೆಸ್ ಕಾಲಿಸ್ ಕೂಡ ಅದ್ಭುತ ಆಟಗಾರ ಎಂದರು.

ಭಾರತ ಮತ್ತು ಆಸ್ಟ್ರೇಲಿಯಾ 106 ಟೆಸ್ಟ್‌ಗಳಲ್ಲಿ ಮುಖಾಮುಖಿಯಾಗಿವೆ. ಭಾರತ 32 ಪಂದ್ಯಗಳನ್ನು ಗೆದ್ದಿದೆ, ಆಸ್ಟ್ರೇಲಿಯಾ 44 ಗೆಲುವುಗಳನ್ನು ಪಡೆದಿದೆ. 29 ಪಂದ್ಯಗಳು ಡ್ರಾ ಮತ್ತು ಒಂದು ಟೈನಲ್ಲಿ ಕೊನೆಗೊಂಡಿವೆ. ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯದಲ್ಲಿ ಭಾರತ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಗೆಲುವು ಸಾಧಿಸಿದೆ. 1996-97 ರಿಂದ ಆಸ್ಟ್ರೇಲಿಯಾ ವಿರುದ್ಧದ 16 ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಳಲ್ಲಿ, ಭಾರತ 10 ಸರಣಿಗಳನ್ನು ಗೆದ್ದಿದೆ, ಆದರೆ ಆಸ್ಟ್ರೇಲಿಯಾ ಐದರಲ್ಲಿ ಗೆದ್ದಿದೆ, ಒಂದು ಡ್ರಾದಲ್ಲಿ ಕೊನೆಗೊಂಡಿದೆ.

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ) ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್) ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್ ಮತ್ತು ಇಶಾನ್ ಕಿಶನ್ 
ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್ ಮತ್ತು ಸೂರ್ಯಕುಮಾರ್ ಯಾದವ್.

ಆಸ್ಟ್ರೇಲಿಯಾ ತಂಡ ಇಂತಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ) ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್.  ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಟಾಡ್ ಮರ್ಫಿ, ಮೈಕೆಲ್ ನೆಸರ್, ಸ್ಟೀವ್ ಸ್ಮಿತ್ (ವಿಸಿ), ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com