WTC ಫೈನಲ್: 4ನೇ ದಿನದ ಆಟ ಅಂತ್ಯ; ಆಸೀಸ್ ಗೆ 7 ವಿಕೆಟ್, ಟೀಂ ಇಂಡಿಯಾಗೆ 280 ರನ್ ಗುರಿ; ಕೊನೆ ದಿನ ಗೆಲ್ಲುವವರಾರು?

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಕುತೂಹಲಕಾರಿ ಘಟಕ್ಕೆ ತಲುಪಿದೆ. 444 ರನ್ ಗಳ ಬೃಹತ್ ಗುರಿಯೊಂದಿಗೆ ನಾಲ್ಕನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 40 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊಹ್ಲಿ
ಕೊಹ್ಲಿ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಕುತೂಹಲಕಾರಿ ಘಟಕ್ಕೆ ತಲುಪಿದೆ. 444 ರನ್ ಗಳ ಬೃಹತ್ ಗುರಿಯೊಂದಿಗೆ ನಾಲ್ಕನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 40 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ ನೀಡಿದ 444 ರನ್‌ಗಳ ಗುರಿಗೆ ಟೀಂ ಇಂಡಿಯಾ ಇನ್ನೂ 280 ರನ್‌ಗಳ ಅಂತರದಲ್ಲಿದೆ. ದಿನದ ಕೊನೆಯ 3 ಸೆಷನ್‌ಗಳಲ್ಲಿ ಟೀಂ ಇಂಡಿಯಾ ಈ ಗುರಿಯನ್ನು ಸಾಧಿಸಬೇಕಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಗೆಲುವಿಗೆ ಇನ್ನೂ 7 ವಿಕೆಟ್‌ಗಳನ್ನು ಕಬಳಿಸಬೇಕಿದೆ.

ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್‌ಗೆ 118 ಎಸೆತಗಳಲ್ಲಿ 71 ರನ್‌ಗಳ ಅಜೇಯ ಜೊತೆಯಾಟ ವಾಡಿದರು. ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 7 ಬೌಂಡರಿ ಸಹಿತ 44 ರನ್ ಗಳಿಸಿದರೆ, ಅಜಿಂಕ್ಯ ರಹಾನೆ 59 ಎಸೆತಗಳಲ್ಲಿ 3 ಬೌಂಡರಿ ಸಹಿತ 20 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಅಂತಿಮ ದಿನದಂದು ಇವರಿಬ್ಬರು ಎಷ್ಟು ಹೊತ್ತು ಬ್ಯಾಟಿಂಗ್ ಮಾಡುತ್ತಾರೆ? ಟೀಮ್ ಇಂಡಿಯಾದ ಫಲಿತಾಂಶ ಅವರು ಎಷ್ಟು ರನ್ ಸೇರಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ.

444 ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಚಹಾ ವಿರಾಮಕ್ಕೂ ಮುನ್ನ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡಿತು. 19 ಎಸೆತಗಳಲ್ಲಿ 2 ಬೌಂಡರಿ ಸಹಿತ 18 ರನ್ ಗಳಿಸಿದ್ದ ಶುಭಮನ್ ಗಿಲ್ ಮೂರನೇ ಅಂಪೈರ್ ವಿವಾದಾತ್ಮಕ ನಿರ್ಧಾರಕ್ಕೆ ಬಲಿಯಾದರು.

ಬಳಿಕ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಎರಡನೇ ವಿಕೆಟ್‌ಗೆ 51 ರನ್ ಸೇರಿಸಿದರು. ರೋಹಿತ್ ಶರ್ಮಾ 60 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ನಾಥನ್ ಲಿಯಾನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು.

ರೋಹಿತ್ ಶರ್ಮಾ ಅವರನ್ನು ನಾಥನ್ ಲಿಯಾನ್ ಔಟ್ ಮಾಡಿರುವುದು ಟೆಸ್ಟ್‌ನಲ್ಲಿ ಇದು 9ನೇ ಬಾರಿ. ಆ ಬಳಿಕ ಚೇತೇಶ್ವರ ಪೂಜಾರ ಕೂಡ ಐದು ಎಸೆತಗಳ ಬಳಿಕ ಪೆವಿಲಿಯನ್ ತಲುಪಿದರು. 47 ಎಸೆತಗಳಲ್ಲಿ 5 ಬೌಂಡರಿ ಸಹಿತ 27 ರನ್ ಗಳಿಸಿದ್ದ ಪೂಜಾರ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಔಟಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com