ರಶ್ಮಿಕಾ ಇಷ್ಟ ಅಂತ ನಾನು ಯಾವಾಗ ಹೇಳಿದೆ? ವೈರಲ್ ಸುದ್ದಿಗೆ ಕ್ರಿಕೆಟಿಗ ಶುಭ್‍ಮನ್ ಗಿಲ್ ಸಿಟ್ಟು
ಯುವ ಕ್ರಿಕೆಟರ್ ಶುಭ್‍ಮನ್ ಗಿಲ್ ಇತ್ತೀಚೆಗೆ ಮಾಧ್ಯಮದವರ ಮುಂದೆ ತಮಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಇಷ್ಟ ಎಂದು ಹೇಳಿದ್ದರು ಎಂಬುದಾಗಿ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ಸ್ಟಾರ್ ಕ್ರಿಕೆಟರ್ ಸ್ಪಷ್ಟನೆ ನೀಡಿದ್ದಾರೆ.
Published: 08th March 2023 09:25 AM | Last Updated: 08th March 2023 03:56 PM | A+A A-

ರಶ್ಮಿಕಾ ಮತ್ತು ಶುಬ್ ಮನ್ ಗಿಲ್
ಯುವ ಕ್ರಿಕೆಟರ್ ಶುಭ್‍ಮನ್ ಗಿಲ್ ಇತ್ತೀಚೆಗೆ ಮಾಧ್ಯಮದವರ ಮುಂದೆ ತಮಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಇಷ್ಟ ಎಂದು ಹೇಳಿದ್ದರು ಎಂಬುದಾಗಿ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ಸ್ಟಾರ್ ಕ್ರಿಕೆಟರ್ ಸ್ಪಷ್ಟನೆ ನೀಡಿದ್ದಾರೆ.
ಯುವ ಕ್ರಿಕೆಟಿಗ ಶುಭ್‍ಮನ್ ಗಿಲ್ ಕೋಪಗೊಂಡಿದ್ದಾರೆ. ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ. ಹಲವು ದಿನಗಳಿಂದ ರಶ್ಮಿಕಾ ಮತ್ತು ಗಿಲ್ ವಿಚಾರ ಬಹಳ ಸುದ್ದಿಯಾಗಿತ್ತು. ಆಕೆ ನನ್ನ ಕ್ರಶ್ ಎಂದು ಗಿಲ್ ಹೇಳಿದ್ದಾರೆ ಎನ್ನುವುದು ಭಾರಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆ ಪೋಸ್ಟ್ ಹರಿದಾಡಿತ್ತು. ಅದನ್ನು ಕಂಡ ಗಿಲ್ ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ನಾನು ಯಾವಾಗ ಈ ರೀತಿ ಹೇಳಿದ್ದೇನೆ, ನನಗೆ ಗೊತ್ತಿಲ್ಲ. ಎಲ್ಲಿಯೂ ನಾನು ಇದರ ಬಗ್ಗೆ ಮಾತಾಡಿಲ್ಲ' ಅಂತ ಯೋಚನೆ ಮಾಡ್ತಿರುವ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಇದೊಂದು ಕಪೋಕಲ್ಪತ ವರದಿ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: ಶುಭ್ ಮನ್ ಗಿಲ್, ಮೊಹಮ್ಮದ್ ಸಿರಾಜ್ ನಾಮನಿರ್ದೇಶನ
ಗಿಲ್ ಜೊತೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಜೊತೆಗಿದ್ದ ಫೋಟೋಗಳು ಕೂಡ ಸಿಕ್ಕಿದ್ದವು. ಆ ಸಮಯದಲ್ಲಿ ಸಾರಾ ಮತ್ತು ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತು ಅವರು ಏನೂ ಹೇಳಿಕೆ ನೀಡಿರಲಿಲ್ಲ. ಆದರೆ, ರಶ್ಮಿಕಾ ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದಾರೆ.