ಐಸಿಸಿ ವಿಶ್ವಕಪ್ ಫೈನಲ್: ಅಹಮದಾಬಾದಿನ ಹೋಟೆಲ್ ರೂಮ್ ದರ ಕೇಳಿದ್ರೆ ಶಾಕ್ ಆಗ್ತೀರಾ!

ಭಾನುವಾರ ಗುಜರಾತಿನ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ- ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಐಸಿಸಿ ವಿಶ್ವಕಪ್ ಫೈನಲ್ ಕಾದಾಟ ವೀಕ್ಷಿಸಲು ನಗರಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದ್ದು, ಹೋಟೆಲ್ ಹಾಗೂ ವಿಮಾನ ಪ್ರಯಾಣದ ದರ ಗಗನಕ್ಕೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ಭಾನುವಾರ ಗುಜರಾತಿನ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ- ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಐಸಿಸಿ ವಿಶ್ವಕಪ್ ಫೈನಲ್ ಕಾದಾಟ ವೀಕ್ಷಿಸಲು ನಗರಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿದ್ದು, ಹೋಟೆಲ್ ಹಾಗೂ ವಿಮಾನ ಪ್ರಯಾಣದ ದರ ಗಗನಕ್ಕೇರಿದೆ.

ವಿಶ್ವಕಪ್ ಫೈನಲ್ ಕುತೂಹಲ ಉತ್ತುಂಗಕ್ಕೇರಿರುವಂತೆಯೇ, ನಗರದಲ್ಲಿನ ಟಾಪ್ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಒಂದು ರಾತ್ರಿಗೆ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇತರ ಹೋಟೆಲ್ ಗಳಲ್ಲಿಯೂ ಐದರಿಂದ ಏಳು ಪಟ್ಟು ದರವನ್ನು ಏರಿಕೆ ಮಾಡಲಾಗಿದೆ.

ಫೈನಲ್ ಪಂದ್ಯ ವೀಕ್ಷಣೆಗಾಗಿ ಭಾರತ ಮಾತ್ರವಲ್ಲದೇ, ದುಬೈ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಿಂದಲೂ ಕ್ರಿಕೆಟ್ ಅಭಿಮಾನಿಗಳು ಬರುತ್ತಿದ್ದಾರೆ. ಅಹಮದಾಬಾದ್ ನ ತ್ರಿಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ 5,00 ರೂಮ್ ಗಳಿದ್ದರೆ, ಇಡೀ ಗುಜರಾತ್ ನಾದ್ಯಂತ ಇವುಗಳ ಸಂಖ್ಯೆ 10,000 ಇದೆ.

1.20 ಲಕ್ಷ ಜನರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗಾಗಿ 30,000 ರಿಂದ 40,000 ಜನರು ಹೊರಗಿನಿಂದ ಬರುವ ಸಾಧ್ಯತೆಯಿದೆ ಎಂದು ಗುಜರಾತ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಒಕ್ಕೂಟದ ಅಧ್ಯಕ್ಷ ನರೇಂದ್ರ ಸೋಮಾನಿ ತಿಳಿಸಿದ್ದಾರೆ. 

ಹೋಟೆಲ್ ರೂಮ್ ಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರವನ್ನು ಹೆಚ್ಚಿಸಲಾಗಿದೆ. ಈ ಹಿಂದೆ 50,000 ದಿಂದ ರೂ. 1.25 ಲಕ್ಷದೊಳಗೆ ರೂಮ್ ದರವಿತ್ತು. ಜನರು ಹೋಟೆಲ್ ರೂಮ್ ಬುಕ್ ಮಾಡಿದ ನಂತರ ವಿಮಾನದ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ರೂಮ್ ದರ ಹೆಚ್ಟಳ ಅಹಮಾದಾಬಾದ್ ಮಾತ್ರವಲ್ಲ, ಸುತ್ತಮುತ್ತಲಿನ ಪಟ್ಟಣಗಳಲ್ಲಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

ನಾನ್ ಸ್ಟಾರ್ ಹೋಟೆಲ್ ಗಳಲ್ಲಿಯೂ ಐದರಿಂದ ಏಳು ಪಟ್ಟು ದರ ಹೆಚ್ಚಳ ಮಾಡಲಾಗಿದೆ. ಇಲ್ಲಿ ಸಾಮಾನ್ಯವಾಗಿ ಒಂದು ರಾತ್ರಿ ರೂ. 3,000 ದಿಂದ 4,000 ದರವಿತ್ತು. ಆದರೆ, ಇದೀಗ ರೂ. 20,000ಕ್ಕೆ ಹೆಚ್ಚಾಗಿದೆ ಎಂದು ಹೋಟೆಲ್ ಸಿಬ್ಬಂದಿಯೊಬ್ಬರು ಖಚಿತಪಡಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com