ವಿಶ್ವಕಪ್ 2023 ಅಧಿಕೃತ ಗೀತೆ ಬಿಡುಗಡೆ: ಐಸಿಸಿ ವಿರುದ್ಧ ಅಭಿಮಾನಿಗಳ ಟೀಕೆ!

ಅಕ್ಟೋಬರ್ 5 ರಂದು ಭಾರತದಲ್ಲಿ ಪ್ರಾರಂಭವಾಗುವ ವಿಶ್ವಕಪ್ 2023 ರ ಅಧಿಕೃತ ಗೀತೆಯನ್ನು ಐಸಿಸಿ ಬುಧವಾರ ಬಿಡುಗಡೆ ಮಾಡಿದೆ. 'ದಿಲ್ ಜಶ್ನ್ ಬೋಲೆ' ಎಂದು ಕರೆಯಲಾಗುವ ಈ ಗೀತೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ರಣವೀರ್ ಸಿಂಗ್
ರಣವೀರ್ ಸಿಂಗ್
Updated on

ಮುಂಬೈ: ಅಕ್ಟೋಬರ್ 5 ರಂದು ಭಾರತದಲ್ಲಿ ಪ್ರಾರಂಭವಾಗುವ ವಿಶ್ವಕಪ್ 2023 ರ ಅಧಿಕೃತ ಗೀತೆಯನ್ನು ಐಸಿಸಿ ಬುಧವಾರ ಬಿಡುಗಡೆ ಮಾಡಿದೆ. 'ದಿಲ್ ಜಶ್ನ್ ಬೋಲೆ' ಎಂದು ಕರೆಯಲಾಗುವ ಈ ಗೀತೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಬಾಲಿವುಡ್‌ನ ಅತ್ಯಂತ ಅಪೇಕ್ಷಿತ ಸಂಯೋಜಕರಲ್ಲಿ ಒಬ್ಬರಾದ ಪ್ರೀತಂ ಸಂಗೀತ ರಚಿಸಿದ್ದಾರೆ. ಈ ಗೀತೆಯಲ್ಲಿ ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ ಕೂಡ ಇದ್ದಾರೆ.ಮೂರು ನಿಮಿಷ 22 ಸೆಕೆಂಡುಗಳ ಗೀತೆಯು 'ಒನ್ ಡೇ ಎಕ್ಸ್‌ಪ್ರೆಸ್' ಹೆಸರಿನ ಕಾಲ್ಪನಿಕ ರೈಲು ಬೋಗಿಯೊಂದರಲ್ಲಿ ರಣವೀರ್ ಮತ್ತು ಸಹಕಲಾವಿದರು ನರ್ತಿಸುವ ದೃಶ್ಯಗಳಿವೆ. 

ಬಿಡುಗಡೆಯಾದ ಗೀತೆ ಕುರಿತು ಮಾತನಾಡಿದ ರಣವೀರ್ ಸಿಂಗ್, "ಸ್ಟಾರ್ ಸ್ಪೋರ್ಟ್ಸ್ ಕುಟುಂಬದ ಭಾಗವಾಗಿ ಮತ್ತು  ಕ್ರಿಕೆಟ್ ಅಭಿಮಾನಿಯಾಗಿ, ಈ ಗೀತೆ ಬಿಡುಗಡೆಯ ಭಾಗವಾಗಿರುವುದು ನಿಜವಾಗಿಯೂ ಗೌರವವಾಗಿದೆ. ಇದು ನಾವೆಲ್ಲರೂ ಪ್ರೀತಿಸುವ ಕ್ರೀಡಾ ಸಂಭ್ರಮಾಚರಣೆಯಾಗಿದೆ ಎಂದಿದ್ದಾರೆ. 

ಸಂಗೀತ ಸಂಯೋಜಕ ಪ್ರೀತಮ್ ಕ್ರಿಕೆಟ್ ಸಂಭ್ರಮವನ್ನು ಆಚರಿಸಲು ಜಗತ್ತನ್ನು ಆಹ್ವಾನಿಸುವ ಗುರಿಯನ್ನು ಈ ಹಾಡು ಹೊಂದಿದೆ ಎಂದು ಹೇಳಿದ್ದಾರೆ. ಈ ಹಾಡು ಕೇವಲ 1.4 ಶತಕೋಟಿ ಭಾರತೀಯ ಅಭಿಮಾನಿಗಳಿಗೆ ಮಾತ್ರವಲ್ಲ, ಭಾರತಕ್ಕೆ ಬಂದು ದೊಡ್ಡ ಕ್ರೀಡೋತ್ಸವದಲ್ಲಿ ಭಾಗಿಯಾಗುವ ಇಡೀ ಜಗತ್ತಿಗೆ ಎಂದು ಹೇಳಿದ್ದಾರೆ. 

ಮ್ಯೂಸಿಕ್ ವೀಡಿಯೋ ಜಾಗತಿಕ ಅಭಿಮಾನಿ ಸಮುದಾಯದ ಭಾವನೆಗಳನ್ನು ಒಳಗೊಂಡಿದೆ, ವಿವಿಧ ಸಂಸ್ಕೃತಿಗಳಾದ್ಯಂತ ರಾಷ್ಟ್ರಗಳು ಮತ್ತು ಅಭಿಮಾನಿಗಳನ್ನು ಒಂದುಗೂಡಿಸುತ್ತದೆ. ಅಭಿಮಾನಿ-ಕೇಂದ್ರಿತ ಗೀತೆಯು ದೊಡ್ಡ ಕ್ರೀಡಾಕೂಟವನ್ನು ಪ್ರತಿನಿಧಿಸುತ್ತದೆ ಎಂದು ಐಸಿಸಿ ಹೇಳಿದೆ. 

ಐಸಿಸಿಯ ಪ್ರಯತ್ನಗಳ ಹೊರತಾಗಿಯೂ, ಹಾಡಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಹಿಂದಿನ  2021 ಮತ್ತು  2011 ರ ಆವೃತ್ತಿಗಳ ಗೀತೆಗಳಂತೆ ಕ್ರಿಕೆಟ್ ಅಭಿಮಾನಿಗಳ ನಾಡಿಮಿಡಿತ ಸೆರೆಹಿಡಿಯಲು ಸಾಧ್ಯವಾಗದ ಕಾರಣ ಐಸಿಸಿಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com