ಐಸಿಸಿ ಕಪ್ ಸಾಂದರ್ಭಿಕ ಚಿತ್ರ
ಐಸಿಸಿ ಕಪ್ ಸಾಂದರ್ಭಿಕ ಚಿತ್ರ

ಐಸಿಸಿ ಏಕದಿನ ವಿಶ್ವಕಪ್: ವಿಜೇತ, ರನ್ನರ್ ಅಪ್ ತಂಡಕ್ಕೆ ಸಿಗುವ ನಗದು ಬಹುಮಾನದ ಮೊತ್ತ ಪ್ರಕಟ!

ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡಕ್ಕೆ 4 ಮಿಲಿಯನ್ ಡಾಲರ್ ( ಅಂದಾಜು ರೂ. 33ಕೋಟಿ) ನಗದು ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 2 ಮಿಲಿಯನ್ ಡಾಲರ್ ( ಅಂದಾಜು 16 ಕೋಟಿ) ಲಭಿಸಲಿದೆ ಎಂದು ಅಂತಾರಾಷ್ಟ್ರೀಯ ಸಮಿತಿ ಐಸಿಸಿ ತಿಳಿಸಿದೆ. 
Published on

ದುಬೈ: ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ತಂಡಕ್ಕೆ 4 ಮಿಲಿಯನ್ ಡಾಲರ್ ( ಅಂದಾಜು ರೂ. 33ಕೋಟಿ) ನಗದು ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 2 ಮಿಲಿಯನ್ ಡಾಲರ್ ( ಅಂದಾಜು 16 ಕೋಟಿ) ಲಭಿಸಲಿದೆ ಎಂದು ಅಂತಾರಾಷ್ಟ್ರೀಯ ಸಮಿತಿ ಐಸಿಸಿ ತಿಳಿಸಿದೆ. 

ಮುಂದಿನ ತಿಂಗಳಿನಿಂದ ಭಾರತದಲ್ಲಿ ನಡೆಯಲಿರುವ ಎಲ್ಲಾ 48 ಪಂದ್ಯಗಳಿಗೆ ಬಹುಮಾನದ ಮೊತ್ತ ಮತ್ತು ಪ್ರೋತ್ಸಾಹಧನವನ್ನು ಐಸಿಸಿ ಪ್ರಕಟಿಸಿದೆ. ಸೆಮಿಫೈನಲ್ ನಲ್ಲಿ ಸೋಲು ಅನುಭವಿಸುವ ಎರಡು ತಂಡಗಳಿಗೆ ತಲಾ ರೂ. 6 ಕೋಟಿ ದೊರೆಯಲಿದೆ.

ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗುವ ಇತರ ಆರು ತಂಡಗಳು ತಲಾ 82 ಲಕ್ಷ ರೂ. ಹಾಗೂ ಲೀಗ್ ಹಂತದಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ತಲಾ ರೂ.33 ಲಕ್ಷ ಪ್ರೋತ್ಸಾಹ ಧನ  ಪಡೆಯಲಿವೆ. ಈ ವಿಶ್ವಕಪ್​ನ ಒಟ್ಟಾರೆ ಬಹುಮಾನದ ಗಾತ್ರ ಸರಿಸುಮಾರು 83 ಕೋಟಿ ರೂ. ಆಗಿದೆ. 

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದೆ. ಟೀಂ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ  ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com