ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯ ಗೇಲಿ: ಸೌರವ್ ಗಂಗೂಲಿ ಹೇಳಿದ್ದು ಹೀಗೆ....

ಐಪಿಎಲ್ ಟಿ-20 ಕ್ರಿಕೆಟ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಅಭಿಮಾನಿಗಳು ಗೇಲಿ ಮಾಡುವುದನ್ನು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಖಂಡಿಸಿದ್ದಾರೆ.
ಸೌರವ್ ಗಂಗೂಲಿ, ಹಾರ್ದಿಕ್ ಪಾಂಡ್ಯ
ಸೌರವ್ ಗಂಗೂಲಿ, ಹಾರ್ದಿಕ್ ಪಾಂಡ್ಯ
Updated on

ಮುಂಬೈ: ಐಪಿಎಲ್ ಟಿ-20 ಕ್ರಿಕೆಟ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಅಭಿಮಾನಿಗಳು ಗೇಲಿ ಮಾಡುವುದನ್ನು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಖಂಡಿಸಿದ್ದಾರೆ.

ಹಿಂದಿನ ಸೀಸನ್‌ಗಳಲ್ಲಿ ತಂಡವನ್ನು ಕಾಪಾಡಿದ್ದ ಹೆಚ್ಚಿನ ಪ್ರೀತಿ ಹೊಂದಿರುವ ರೋಹಿತ್ ಶರ್ಮಾ ಅವರನ್ನು ಬದಲಿಸಿದರೆ ಅದು ಹಾರ್ದಿಕ್ ಪಾಂಡ್ಯ ಅವರ ತಪ್ಪಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಗಂಗೂಲಿ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಘೋಷಿಸಿದಾಗಿನಿಂದ ಅಭಿಮಾನಿಗಳ ಕೋಪ ಹೇಳತೀರದಾಗಿದೆ. ಗುಜರಾತ್ ತಂಡದಿಂದ ಹಿಂದಿರುಗಿದ ನಂತರ ಅಹಮದಾಬಾದ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಮೊದಲ ಪಂದ್ಯದಲ್ಲಿ ಆಡಿದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಗೇಲಿ ಮಾಡಲಾಗಿತ್ತು. ನಂತರ ಹೈದ್ರಾಬಾದ್ ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲೂ ಇದು ಮುಂದುವರೆಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಆಡುವಾಗಲೂ ಅಭಿಮಾನಿಗಳು ಗೇಲಿ ಮಾಡಿದರು.

ಸೌರವ್ ಗಂಗೂಲಿ, ಹಾರ್ದಿಕ್ ಪಾಂಡ್ಯ
IPL 2024: ಟಾಸ್ ವೇಳೆ ಹಾರ್ದಿಕ್ ಪಾಂಡ್ಯಾ ಗುರಿಯಾಗಿಸಿ ಬೂ.. ಬೂ.. ಎಂದ ಪ್ರೇಕ್ಷಕರು, ಖಡಕ್ ತಿರುಗೇಟು ಕೊಟ್ಟ ಸಂಜಯ್ ಮಂಜ್ರೇಕರ್

ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್‌ ತಂಡದ ತರಬೇತಿ ಅವಧಿ ವೇಳೆ ಈ ಕುರಿತು ಮಾತನಾಡಿದ ಗಂಗೂಲಿ, ಹಾರ್ದಿಕ್ ಪಾಂಡ್ಯ ಅವರನ್ನು ಗೇಲಿ ಮಾಡಬಾರದು. ಇದು ಸರಿಯಲ್ಲ . ಫ್ರಾಂಚೈಸಿಯು ಅವರನ್ನು ನಾಯಕರನ್ನಾಗಿ ನೇಮಕ ಮಾಡಿದೆ. ಕ್ರೀಡೆಯಲ್ಲಿ ಇದು ಸಹಜ ಎಂದರು. ನಿಸ್ಸಂಶಯವಾಗಿ, ರೋಹಿತ್ ಶರ್ಮಾ ವಿಭಿನ್ನ ಮಟ್ಟದ ನಾಯಕ. ಓರ್ವ ನಾಯಕ ಹಾಗೂ ಆಟಗಾರನಾಗಿಯೂ ಭಾರತ ಹಾಗೂ ಮುಂಬೈ ಪರ ಅವರ ನಿರ್ವಹಣೆ ಅತ್ಯುತ್ತಮವಾಗಿದೆ. ಆದರೆ ಹಾರ್ದಿಕ್ ಅವರನ್ನು ನಾಯಕನಾಗಿ ನೇಮಿಸಿರುವುದು ಅವರ ತಪ್ಪು ಅಲ್ಲ. ನಾವೆಲ್ಲರೂ ಅದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com