IPL 2024: ಗುಜರಾತ್ ವಿರುದ್ಧ ಲಕ್ನೋಗೆ ತವರಿನಲ್ಲಿ 33 ರನ್ ಭರ್ಜರಿ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ 2024ರ 21ನೇ ಪಂದ್ಯದಲ್ಲಿ ಭಾನುವಾರ ಗುಜರಾತ್​ ಜೈಂಟ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.
ಲಕ್ನೋ ತಂಡ
ಲಕ್ನೋ ತಂಡ

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ 21ನೇ ಪಂದ್ಯದಲ್ಲಿ ಭಾನುವಾರ ಗುಜರಾತ್​ ಜೈಂಟ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 33 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಂದು ಅಟಲ್​ಬಿಹಾರಿ ವಾಜಪೇಯಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋ, ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.

ಗೆಲುವಿಗೆ 164 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ತಂಡ 18.5 ಓವರ್​ಗಳಲ್ಲಿ 130 ರನ್​ಗಳಿಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

ಲಕ್ನೋ ತಂಡ
IPL 2024: ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್, ಹಾರ್ದಿಕ್ ಖುಷ್!

ಮಾರ್ಕಸ್​ ಸ್ಟೊಯ್ನಿಸ್​ (43 ಎಸೆತಕ್ಕೆ 58 ರನ್​) ಅರ್ಧ ಶತಕ ಹಾಗೂ ಬೌಲರ್​ಗಳಾದ ಯಶ್​ ಠಾಕೂರ್​ (3.5 ಓವರ್​, 30 ರನ್​, 5 ವಿಕೆಟ್​​) ಹಾಗೂ ಕೃಣಾಲ್ ಪಾಂಡ್ಯ (4 ಓವರ್​ 11 ರನ್​, 3 ವಿಕೆಟ್​) ಮಾರಕ ಬೌಲಿಂಗ್​ ದಾಳಿಗೆ ನಲುಗಿದ ಗುಜರಾತ್​ ಜೈಂಟ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 33 ರನ್​ಗಳಿಂದ ಸೋಲು ಅನುಭವಿಸಿತು.

ಇದು ಗುಜರಾತ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಮೂರನೇ ಸೋಲು. ಇದೇ ವೇಳೆ ಕೆ. ಎಲ್​ ರಾಹುಲ್ ನೇತೃತ್ವದ ಲಕ್ನೋ ತಂಡ ಹ್ಯಾಟ್ರಿಕ್ ಜಯವನ್ನು ತನ್ನದಾಗಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com