IPL 2024: ಪಂಜಾಬ್ ವಿರುದ್ಧ ಗೆದ್ದು ಬೀಗಿದ ಗುಜರಾತ್; ಸತತ ನಾಲ್ಕನೇ ಗೆಲುವು ಕಂಡ GT

ಐಪಿಎಲ್ 2024ರ ಟೂರ್ನಿಯಲ್ಲಿ ಇಂದು ನಡೆದ 37ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮೂರು ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ಒಟ್ಟಾರೆ ಎಂಟು ಅಂಕ ಗಳಿಸಿದೆ.
ಗುಜರಾತ್ ಟೈಟಾನ್ಸ್
ಗುಜರಾತ್ ಟೈಟಾನ್ಸ್

ಐಪಿಎಲ್ 2024ರ ಟೂರ್ನಿಯಲ್ಲಿ ಇಂದು ನಡೆದ 37ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮೂರು ವಿಕೆಟ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ಒಟ್ಟಾರೆ ಎಂಟು ಅಂಕ ಗಳಿಸಿದೆ.

ಇನ್ನು ಈ ಪಂದ್ಯದ ಸೋಲಿನಿಂದಾಗಿ ಪಂಜಾಬ್ ಕಿಂಗ್ಸ್ ನಾಲ್ಕು ಅಂಕಗಳೊಂದಿಗೆ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ನ ಈ ಗೆಲುವಿನಲ್ಲಿ ರಾಹುಲ್ ತೆವಾಟಿಯಾ ಮಹತ್ವದ ಕೊಡುಗೆ ನೀಡಿದ್ದಾರೆ. ರಾಹುಲ್ 36 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಋತುವಿನಲ್ಲಿ ತಂಡಕ್ಕೆ ಇದು ನಾಲ್ಕನೇ ಗೆಲುವಾಗಿದೆ.

ಪಂಜಾಬ್ ನೀಡಿದ 143 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ಉತ್ತಮ ಆರಂಭ ಪಡೆದಿತ್ತು. ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ನಡುವೆ ಮೊದಲ ವಿಕೆಟ್‌ಗೆ 25 ರನ್‌ಗಳ ಜೊತೆಯಾಟವಿತ್ತು. ಅರ್ಷದೀಪ್ ಸಿಂಗ್ ತಂಡಕ್ಕೆ ಮೊದಲ ಪೆಟ್ಟು ನೀಡಿದರು. 13 ರನ್ ಗಳಿಸಿ ಸಹಾ ಔಟಾದರು. ಇದರ ಬೆನ್ನಲ್ಲೇ 35 ರನ್ ಗಳಿಸಿದ್ದ ಗಿಲ್ ಔಟಾಗಿ ಪೆವಿಲಿಯನ್ ಸೇರಿದರು. ಈ ಪಂದ್ಯದಲ್ಲಿ ಸಾಯಿ ಸುದರ್ಶನ್ 31 ರನ್ ಬಾರಿಸಿದರು. ಇನ್ನು ಡೇವಿಡ್ ಮಿಲ್ಲರ್ ನಾಲ್ಕು ರನ್ ಗಳಿಸಿ ಔಟಾದರೆ, ಅಜ್ಮತುಲ್ಲಾ ಉಮರ್ಜಾಯ್ 13 ರನ್ ಗಳಿಸಿ, ಶಾರುಖ್ ಖಾನ್ ಮೂರು ರನ್ ಗಳಿಸಿ ಔಟಾದರು. ಪಂಜಾಬ್ ಪರ ಹರ್ಷಲ್ ಪಟೇಲ್ ಮೂರು ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಎರಡು ವಿಕೆಟ್ ಪಡೆದರು. ಅದೇ ವೇಳೆ ಅರ್ಷದೀಪ್ ಸಿಂಗ್ ಮತ್ತು ಸ್ಯಾಮ್ ಕುರ್ರಾನ್ ತಲಾ ಒಂದು ವಿಕೆಟ್ ಪಡೆದರು.

ಗುಜರಾತ್ ಟೈಟಾನ್ಸ್
Kohli's Controversial Out: ಇದು ನೋಬಾಲ್ ಅಥವಾ ಔಟ?: ಕೊನೆಗೆ ಟಿವಿ ಅಂಪೈರ್ ಔಟ್ ಕೊಟ್ಟಿದ್ದೇಕೆ? ವಿಡಿಯೋ!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಬಂದ ಪಂಜಾಬ್ ಕಿಂಗ್ಸ್ ಪ್ರದರ್ಶನ ಉತ್ತಮವಾಗಿರಲಿಲ್ಲ. ತಂಡ 20 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಪಂಜಾಬ್‌ನ ಬ್ಯಾಟಿಂಗ್‌ ಕ್ರಮಾಂಕ ವಿಫಲವಾಗಿದೆ. ಪ್ರಭಾಸಿಮ್ರಾನ್ ಸಿಂಗ್ ಮತ್ತು ಹರ್‌ಪ್ರೀತ್ ಬ್ರಾರ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಆಡಲಿಲ್ಲ. ಇಬ್ಬರೂ ಕ್ರಮವಾಗಿ 35 ಮತ್ತು 29 ರನ್ ಗಳಿಸಿದರು. ಅದೇ ಸಮಯದಲ್ಲಿ ಸ್ಯಾಮ್ ಕುರ್ರಾನ್ 20 ಗಳಿಸಿ ಔಟಾದರು. ಗುಜರಾತ್ ಪರ ಸಾಯಿ ಕಿಶೋರ್ ನಾಲ್ಕು ವಿಕೆಟ್ ಪಡೆದರೇ ಮೋಹಿತ್ ಶರ್ಮಾ ಮತ್ತು ನೂರ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com