IPL 2024: KKR ವಿರುದ್ಧ ಪಂಜಾಬ್ ಗೆ 8 ವಿಕೆಟ್ ಜಯ: ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆ!

ಕೋಲ್ಕತ್ತಾದಲ್ಲಿ ನಡೆದ KKR- ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ, ಪಂಜಾಬ್ ತಂಡ 8 ವಿಕೆಟ್ ಗಳ ಗೆಲುವು ದಕ್ಕಿಸಿಕೊಂಡಿದೆ.
ಪಂಜಾಬ್ (ಸಂಗ್ರಹ ಚಿತ್ರ)
ಪಂಜಾಬ್ (ಸಂಗ್ರಹ ಚಿತ್ರ)online desk

ಕೋಲ್ಕತ್ತ: ಕೋಲ್ಕತ್ತಾದಲ್ಲಿ ನಡೆದ KKR- ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ, ಪಂಜಾಬ್ ತಂಡ 8 ವಿಕೆಟ್ ಗಳ ಗೆಲುವು ದಕ್ಕಿಸಿಕೊಂಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಿಗದಿತ 20 ಓವರ್ ಗಳಿಗೆ 261 ರನ್ ಗಳಿಗೆ ಕಟ್ಟಿ ಹಾಕಿತು.

ಬಳಿಕ ರನ್ ಚೇಸಿಂಗ್ ನಲ್ಲಿ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ ಕೇವಲ 18.4 ಓವರ್ ಗಳಲ್ಲಿ 262 ರನ್ ಗಳಿಸುವ ಮೂಲಕ ಎದುರಾಳಿ ವಿರುದ್ಧ ಗೆಲುವು ದಾಖಲಿಸಿತು. ಐಪಿಎಲ್ ನಲ್ಲಿ ತಂಡವೊಂದು ರನ್ ಚೇಸ್ ನಲ್ಲಿ 250 ರನ್ ಗಳಿಗೂ ಅಧಿಕ ರನ್ ಗಳಿಸಿದ ದಾಖಲೆಯನ್ನು ಪಂಜಾಬ್ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. ಇದಷ್ಟೇ ಅಲ್ಲದೇ ಅತ್ಯಂತ ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿ ಗೆಲುವು ದಾಖಲಿಸಿದ ತಂಡ ಎಂಬ ದಾಖಲೆಯನ್ನೂ ಪಂಜಾಬ್​ ನಿರ್ಮಿಸಿದೆ.

ಪಂಜಾಬ್ (ಸಂಗ್ರಹ ಚಿತ್ರ)
ಕೋಲ್ಕತ್ತ- ಬೆಂಗಳೂರು ಇಂಡಿಗೋ ವಿಮಾನಕ್ಕೆ ಮತ್ತೆ ಟಿಶ್ಶ್ಯೂ ಪೇಪರ್ ಬಾಂಬ್ ಬೆದರಿಕೆ

ಕೆಕೆಆರ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ 224 ರನ್​ ಚೇಸ್​​ ಮಾಡಿದ್ದ ದಾಖಲೆಯನ್ನು ಪಂಜಾಬ್ ತಂಡ ಮುರಿದಿದೆ.

ಪಂಜಾಬ್​ ಕಿಂಗ್ಸ್​ ಪರ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೇರ್​ಸ್ಟೋ ಕೇವಲ 5.6 ಓವರ್​ ಗಳಲ್ಲಿ ಮೊದಲ ವಿಕೆಟ್​​ಗೆ 93 ರನ್​ ಗಳಿಸುವ ಮೂಲಕ ಅಬ್ಬರದ ಬ್ಯಾಟಿಂಗ್​ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com