ಐಪಿಎಲ್ 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಲಖನೌ ಗೆ 7 ವಿಕೆಟ್ ಸೋಲು: ಆರ್ ಆರ್ ಗೆ 8 ನೇ ಗೆಲುವು!

ಲಖನೌ ನಲ್ಲಿ ನಡೆದ ಐಪಿಎಲ್ 2024 ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಸೋಲು ಕಂಡಿದೆ.

ಆರ್ ಆರ್ ತಂಡದ ನಾಯಕ ಸಂಜು ಸ್ಯಾಮನ್ಸ್ (71 ರನ್) ಧ್ರುವ ಜುರೇಲ್‌ (52 ರನ್) ಬಿರುಸಿನ ಬ್ಯಾಟಿಂಗ್ ನ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ, ಆತಿಥೇಯ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಜಯ ಗಳಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಖನೌ ತಂಡ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 192 ರನ್‌ ಕಲೆಹಾಕಿತು. ನಾಯಕ ಕೆ.ಎಲ್‌.ರಾಹುಲ್‌ (76) ಹಾಗೂ ದೀಪಕ್‌ ಹೂಡ (50) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.

193 ರನ್ ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ 19 ಓವರ್ ಗಳಿಗೆ 199 ರನ್ ಗಳಿಸಿ ಗೆಲುವು ಸಾಧಿಸಿತು.

ರಾಜಸ್ಥಾನ ತಂಡ ಈ ವರೆಗೂ ಆಡಿರುವ 9 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿದ್ದು, ಲಖನೌ ತಂಡ 5 ಪಂದ್ಯಗಳಲ್ಲಿ ಗೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com