ಚೆನ್ನೈ: ಚೆನ್ನೈ ನಲ್ಲಿ ನಡೆದ ಐಪಿಎಲ್ 2024 ರ 46 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ 78 ರನ್ ಗಳ ಜಯ ಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳನ್ನು ಸಿಎಸ್ ಕೆ ತಂಡದ ಬ್ಯಾಟ್ಸ್ ಮನ್ ಗಳು ಸಮರ್ಥವಾಗಿ ಎದುರಿಸಿದರು.
ಆರಂಭಿಕ ಆಟಗಾರ ಅಜಿಂಕ್ಯಾ ರೆಹಾನೆ 12 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ರಿತುರಾಜ್ ಗಾಯಕ್ವಾಡ್ 54 ಎಸೆತಗಳಲ್ಲಿ 98 ರನ್ ಗಳಿಸಿದರೆ, ಡೇರಿಲ್ ಮಿಚೆಲ್ 32 ಎಸೆತಗಳಲ್ಲಿ 52 ರನ್, ಶಿವಂ ದುಬೆ 20 ಎಸೆತಗಳಲ್ಲಿ 39 ರನ್ ಗಳಿಸಿದರು. ಅಂತಿಮವಾಗಿ ಸಿಎಸ್ ಕೆ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.
213 ರನ್ ಗಳ ಗುರಿ ಬೆನ್ನಟ್ಟಿದ ಎಸ್ ಆರ್ ಹೆಚ್ ತಂಡ ಆರಂಭದಲ್ಲಿ ಎಡವಿತು ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ ಕೇವಲ 7 ಎಸೆತಗಳನ್ನು ಎದುರಿಸಿ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಅಭಿಷೇಕ್ ಶರ್ಮಾ 15 ರನ್ ಗಳಿಗೆ ಔಟ್ ಆದರು. ಐಡೆನ್ ಮಾರ್ಕ್ರಾಮ್ 32 ರನ್ ಗಳಿಸಿದ್ದು ಹೊರತುಪಡಿಸಿದರೆ, ಉಳಿದ ಬ್ಯಾಟ್ಸ್ಮನ್ ಗಳು ಸಿಎಸ್ ಕೆ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗದೇ ವಿಕೆಟ್ ಒಪ್ಪಿಸಿದ್ದರ ಪರಿಣಾಮ ಎಸ್ ಆರ್ ಹೆಚ್ ಎಂಡ 18.5 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 134 ರನ್ ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.
Advertisement