ಕ್ರಿಕೆಟಿಗ ಶಾಕಿಬ್ ಅಲ್ ಹಸನ್
ಕ್ರಿಕೆಟ್
ಬಾಂಗ್ಲಾದೇಶ: ಸಂಸತ್ ಚುನಾವಣೆಯಲ್ಲಿ ಗೆದ್ದ ಕ್ರಿಕೆಟಿಗ ಶಾಕಿಬ್ ಅಲ್ ಹಸನ್ ನಿಂದ ಅಭಿಮಾನಿಗೆ ಕಪಾಳ ಮೋಕ್ಷ
ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಶಾಕಿಬ್ ಅಲ್ ಹಸನ್ ಸಂಸತ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಈ ಚುನಾವಣೆಯನ್ನು ಅಲ್ಲಿನ ವಿಪಕ್ಷಗಳು ಬಹಿಷ್ಕರಿಸಿದ್ದವು.
ನವದೆಹಲಿ: ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಶಾಕಿಬ್ ಅಲ್ ಹಸನ್ ಸಂಸತ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಈ ಚುನಾವಣೆಯನ್ನು ಅಲ್ಲಿನ ವಿಪಕ್ಷಗಳು ಬಹಿಷ್ಕರಿಸಿದ್ದವು.
36 ವರ್ಷದ ಆಲ್ ರೌಂಡರ್, ಮಗುರಾ ಕ್ಷೇತ್ರದಿಂದ 150,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಾಕಿಬ್ ಆಡಳಿತಾರೂಢ ಪಕ್ಷದ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದರು, ಚುನಾವಣೆಯಲ್ಲಿ ತಮ್ಮ ಗೆಲುವಿನ ಬಗ್ಗೆ ಶಾಬಿಕ್ ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ 5 ನೇ ಬಾರಿಗೆ ಪ್ರಧಾನಿಯಾಗುವುದು ನಿಚ್ಚಳವಾಗಿದೆ. ಈ ಲೋಕಸಭಾ ಚುನಾವಣೆಯನ್ನು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ (ಬಿಎನ್ ಪಿ) ಬಹಿಷ್ಕರಿಸಿತ್ತು.
ಈ ನಡುವೆ ಚುನಾವಣೆಯಲ್ಲಿ ಗೆದ್ದ ಶಾಕೀಬ್ ಅಭಿಯೊಬ್ಬರಿಗೆ ಕಪಾಳ ಮೋಕ್ಷ ಮಾಡಿರುವ ವೀಡಿಯೋ ವೈರಲ್ ಆಗತೊಡಗಿದೆ.