ಅತ್ಯಾಚಾರ ಪ್ರಕರಣ: ನೇಪಾಳ ಮಾಜಿ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ ಎಂಟು ವರ್ಷ ಜೈಲು ಶಿಕ್ಷೆ!

ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸ್ಟಾರ್ ಕ್ರಿಕೆಟ್ ನಾಯಕ ಸಂದೀಪ್ ಲಮಿಚಾನೆ ಅವರಿಗೆ ನೇಪಾಳದ ನ್ಯಾಯಾಲಯವು ಬುಧವಾರ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸಂದೀಪ್ ಲಮಿಚಾನೆ
ಸಂದೀಪ್ ಲಮಿಚಾನೆ

ಕಟ್ಮಂಡು: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸ್ಟಾರ್ ಕ್ರಿಕೆಟ್ ನಾಯಕ ಸಂದೀಪ್ ಲಮಿಚಾನೆ ಅವರಿಗೆ ನೇಪಾಳದ ನ್ಯಾಯಾಲಯವು ಬುಧವಾರ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನೇಪಾಳ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಕೂಡ ಆಗಿದ್ದ 24 ವರ್ಷದ ಪ್ರತಿಭಾವಂತ ಸ್ಪಿನ್ನರ್‌, 17 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ 2023ರ ಅಕ್ಟೋಬರ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇದೀಗ 2024ರ ಜನವರಿ 10ರಂದು ಕಟ್ಮಂಡು ಜಿಲ್ಲಾ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 8 ವರ್ಷಗಳ ಜೈಲುವಾಸದ ಕಠಿಣ ಶಿಕ್ಷೆ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ಮೂಲಕ ತಿಳಿದು ಬಂದಿದೆ.

2022ರ ಆಗಸ್ಟ್‌ನಲ್ಲಿ ಕಾಟ್ಮಂಡುವಿನ ಹೋಟೆಲ್‌ ಒಂದರಲ್ಲಿ ತಮ್ಮನ್ನು ಸಂದೀಪ್‌ ಲಾಮಿಚಾನೆ ಅತ್ಯಾಚಾರ ಮಾಡಿದ್ದಾರೆ ಎಂದು 17 ವರ್ಷದ ಯುವತಿಯೊಬ್ಬರು ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ 2023ರ ಜನವರಿಯಲ್ಲಿ ಜಾಮೀನಿನ ಮೇಲೆ ಸಂದೀಪ್‌ ಬಿಡುಗಡೆ ಆಗಿದ್ದರು ಕೂಡ. ಆದರೆ, 2023ರ ಡಿಸೆಂಬರ್‌ನಲ್ಲಿ ಅವರ ವಿರುದ್ಧದ ಆರೋಪಗಳು ನಿಜ ಎಂದು ಸಾಬೀತಾಗಿದೆ.

ನ್ಯಾಯಾಲಯವು ಅವರಿಗೆ ಎಂಟು ವರ್ಷಗಳ ಸಜೆ ವಿಧಿಸಿದೆ’ ಎಂದು ಕಠ್ಮಡು ಜಿಲ್ಲಾ ನ್ಯಾಯಾಲಯದ ಅಧಿಕಾರಿ ರಾಮು ಶರ್ಮಾ ಎಎಫ್‌ಪಿಗೆ ತಿಳಿಸಿದ್ದಾರೆ. ಲಮಿಚಾನೆ ಅವರಿಗೆ 1,85,000 ರು. (3 ಲಕ್ಷ ನೇಪಾಳಿ ರೂಪಾಯಿ) ಮೊತ್ತವನ್ನು ದಂಡವಾಗಿ ಮತ್ತು ಇದರ ಜೊತೆಗೆ 1,25,000 (2 ಲಕ್ಷ ನೇಪಾಳಿ ರೂಪಾಯಿ) ಮೊತ್ತವನ್ನು ಸಂತ್ರಸ್ತೆಗೆ ಮಾನಸಿಕ ಯಾತನೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಶಿಕ್ಷೆ ಪ್ರಕಟಿಸುವ ವೇಳೆ ಲಮಿಚಾನೆ ನ್ಯಾಯಾಲಯದಲ್ಲಿರಲಿಲ್ಲ. ಈ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವುದಾಗಿ ಅವರ ವಕೀಲ ಸರೋಜ್ ಗಿಮಿರೆ ತಿಳಿಸಿದರು. ಅತ್ಯಾಚಾರದ ವೇಳೆ ಅಪ್ರಾಪ್ತ ವಯಸ್ಸಿನವಳಾಗಿದ್ದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದರು. ಆದರೆ ಈ ಹಿಂದಿನ ಆದೇಶದಲ್ಲಿ ನ್ಯಾಯಾಲಯವು ಆಕೆಗೆ 18 ವರ್ಷ ಎಂದು ಹೇಳಿತ್ತು.

ಲಮಿಚಾನೆ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದರು. ಅವರ ವಿರುದ್ಧ ದೂರು ಕೇಳಿಬಂದ ನಂತರ ಅವರನ್ನು ನಾಯಕತ್ವದಿಂದ ಕಿತ್ತುಹಾಕಲಾಗಿತ್ತು. ಅವರನ್ನು ಬಂಧಿಸಲಾಯಿತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರು ಆಡುವುದಕ್ಕೆ ಇದ್ದ ನಿರ್ಬಂಧವನ್ನು ಕ್ರಿಕೆಟ್‌ ಮಂಡಳಿ ತೆಗೆದುಹಾಕಿತ್ತು.

ಜನವರಿ 12 ರಂದು, ಪಟಾನ್ ಹೈಕೋರ್ಟ್ ಲಾಮಿಚಾನೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಕಾಠ್ಮಂಡು ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಸಾಕಷ್ಟು ಆಧಾರಗಳಿಲ್ಲದ ಕಾರಣವನ್ನು ತಳ್ಳಿಹಾಕಿತು. ಮರುದಿನ ಎರಡು ಮಿಲಿಯನ್ ರೂ ಜಾಮೀನಿನ ಮೇಲೆ ಲಾಮಿಚಾನೆ ಅವರನ್ನು ಬಿಡುಗಡೆ ಮಾಡಿದರು. ಪ್ರತ್ಯೇಕ ನಡೆಯಲ್ಲಿ, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ಪಂದ್ಯಗಳಿಗಾಗಿ ಯುಎಇಯಲ್ಲಿ ರಾಷ್ಟ್ರೀಯ ತಂಡವನ್ನು ಸೇರಲು ಅವಕಾಶ ನೀಡುವಂತೆ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com