ಚಾಂಪಿಯನ್ ಟ್ರೋಫಿ 2025: ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಮಾರ್ಚ್ 1ಕ್ಕೆ ಭಾರತ vs ಪಾಕಿಸ್ತಾನ ಪಂದ್ಯ

ಮಾರ್ಚ್ 1 ರಂದು ಲಾಹೋರ್‌ನಲ್ಲಿ ಭಾರತ- ಪಾಕಿಸ್ತಾನ ನಡುವಣ ಪಂದ್ಯವನ್ನು ನಿಗದಿಪಡಿಸಲಾಗಿದೆ. ಆದರೆ, ಬಿಸಿಸಿಐ ಇನ್ನೂ ತಾತ್ಕಾಲಿಕ ವೇಳಾಪಟ್ಟಿಗೆ ಒಪ್ಪಿಗೆ ನೀಡಿಲ್ಲ.
ರೋಹಿತ್ ಶರ್ಮಾ, ಬಾಬರ್ ಸಾಂದರ್ಭಿಕ ಚಿತ್ರ
ರೋಹಿತ್ ಶರ್ಮಾ, ಬಾಬರ್ ಸಾಂದರ್ಭಿಕ ಚಿತ್ರ

ಇಸ್ಲಾಮಬಾದ್: ಮುಂದಿನ ವರ್ಷ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಚಾಂಪಿಯನ್ ಟ್ರೋಫಿ ಆಯೋಜಿಸುತ್ತಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 1 ರಂದು ಲಾಹೋರ್‌ನಲ್ಲಿ ಭಾರತ- ಪಾಕಿಸ್ತಾನ ನಡುವಣ ಪಂದ್ಯವನ್ನು ನಿಗದಿಪಡಿಸಲಾಗಿದೆ. ಆದರೆ, ಬಿಸಿಸಿಐ ಇನ್ನೂ ತಾತ್ಕಾಲಿಕ ವೇಳಾಪಟ್ಟಿಗೆ ಒಪ್ಪಿಗೆ ನೀಡಿಲ್ಲ ಎಂದು ಐಸಿಸಿಯ ಹಿರಿಯ ಸದಸ್ಯರೊಬ್ಬರು ಬುಧವಾರ ಹೇಳಿದ್ದಾರೆ.

ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 10 ರವರೆಗೆ ವೇಳಾಪಟ್ಟಿ ನಿಗದಿಯಾಗಿದೆ. ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ವೀಕ್ಷಣೆಗೆ ಆಗಮಿಸಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಭದ್ರತೆ ಮತ್ತು ವ್ಯವಸ್ಥಾಪನಾ ಕಾರಣಗಳಿಗಾಗಿ ಲಾಹೋರ್‌ನಲ್ಲಿ ನಿಗದಿಪಡಿಸಿರುವ ಭಾರತದ ಎಲ್ಲಾ ಪಂದ್ಯಗಳೊಂದಿಗೆ 15-ಪಂದ್ಯಗಳ ವೇಳಾಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ರೋಹಿತ್ ಶರ್ಮಾ, ಬಾಬರ್ ಸಾಂದರ್ಭಿಕ ಚಿತ್ರ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲೇ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ, 7ನೇ ಸ್ಥಾನಕ್ಕಾಗಿ ಇಂಗ್ಲೆಂಡ್-ಆಫ್ಘಾನಿಸ್ತಾನ ಪೈಪೋಟಿ

15 ಪಂದ್ಯಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕರಡನ್ನು ಪಿಸಿಬಿ ಸಲ್ಲಿಸಿದೆ. ಲಾಹೋರ್‌ನಲ್ಲಿ ಏಳು ಪಂದ್ಯಗಳು, ಕರಾಚಿಯಲ್ಲಿ ಮೂರು ಮತ್ತು ರಾವಲ್ಪಿಂಡಿಯಲ್ಲಿ ಐದು ಪಂದ್ಯಗಳು ನಿಗದಿಯಾಗಿವೆ ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ. ಆರಂಭಿಕ ಪಂದ್ಯ ಕರಾಚಿಯಲ್ಲಿ ನಡೆಯಲಿದ್ದು, ಎರಡು ಸೆಮಿಫೈನಲ್ ಪಂದ್ಯಗಳು ಕರಾಚಿ ಮತ್ತು ರಾವಲ್ಪಂಡಿಯಲ್ಲಿ, ಫೈನಲ್ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಭಾರತದ ಎಲ್ಲಾ ಪಂದ್ಯಗಳು ಲಾಹೋರ್ ನಲ್ಲಿಯೇ ನಡೆಯಲಿವೆ ಎಂದು ಮೂಲಗಳು ಹೇಳಿವೆ.

ಭಾರತವು ಎ ಗುಂಪಿನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ನೊಂದಿಗೆ ಸೇರಿಕೊಂಡಿದ್ದರೆ, ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಸೇರಿವೆ. ಇತ್ತೀಚೆಗೆ, ICC ಭದ್ರತಾ ತಂಡ ಮೈದಾನ ಮತ್ತಿತರ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಐಸಿಸಿ ಟೂರ್ನಿಯ ಮುಖ್ಯಸ್ಥ ಕ್ರಿಸ್ ಟೆಟ್ಲಿ ಅವರು ಇಸ್ಲಾಮಾಬಾದ್‌ನಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಭೇಟಿಯಾಗಿದ್ದರು.

ಪಾಕಿಸ್ತಾನ 2023 ರಲ್ಲಿ ಏಷ್ಯಾಕಪ್ ಆಯೋಜಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಆಯೋಜಿಸಿಲ್ಲ. ಬಿಸಿಸಿಐ ಹೊರತುಪಡಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ದೇಶಗಳ ಎಲ್ಲಾ ಮಂಡಳಿಯ ಮುಖ್ಯಸ್ಥರು ಅವರಿಗೆ ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ ಆದರೆ ಬಿಸಿಸಿಐ ತನ್ನ ಸರ್ಕಾರವನ್ನು ಸಂಪರ್ಕಿಸಿ, ಐಸಿಸಿಗೆ ಅಂತಿಮ ತೀರ್ಮಾನ ಹೇಳುವುದಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com