ಕಿರುತೆರೆ ನಟಿ ರಿಧಿಮಾ ಪಂಡಿತ್ ಹಾಗೂ ಟೀಂ ಇಂಡಿಯಾ ಆಟಗಾರ ಶುಭ್ಮನ್ ಗಿಲ್ ವಿವಾಹ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿದೆ. 2024ರ ಡಿಸೆಂಬರ್ನಲ್ಲಿ ಇವರ ಮದುವೆ ನಡೆಯಲಿದೆ ಎಂದು ಕೂಡ ಹೇಳಲಾಗಿತ್ತು. ಈ ಮದುವೆ ವದಂತಿಗೆ ರಿಧಿಮಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ರಿಧಿಮಾ ಬಣ್ಣದ ಲೋಕಕ್ಕೆ ಬಂದು 8 ವರ್ಷಗಳು ಕಳೆದಿವೆ. ‘ಬಹು ಹಮಾರಿ ರಜ್ನಿ ಕಾಂತ್’ ಅವರ ನಟನೆಯ ಮೊದಲ ಧಾರಾವಾಹಿ. ಇದು 2016ರಲ್ಲಿ ಪ್ರಸಾರ ಕಂಡಿತು. ಆ ಬಳಿಕ ಅವರು ಹಲವು ಹಿಂದಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅವರಿಗೆ ಕೆಲವು ಅವಾರ್ಡ್ಗಳು ಬಂದಿವೆ. ರಿಧಿಮಾಗೆ 33 ವರ್ಷ ವಯಸ್ಸು. ಅವರು ಶುಭ್ಮನ್ ಜೊತೆ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದನ್ನು ಅವರು ಸುಳ್ಳು ಎಂದಿದ್ದಾರೆ.
ಇದು ಕೆಲವರ ಕಲ್ಪನೆ ಎಂದು ನಾನು ಊಹಿಸುತ್ತೇನೆ, ಯಾರೋ ಕಥೆಯನ್ನು ರಚಿಸುತ್ತಾರೆ, ನಂತರ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತದೆ. ನನಗೆ ವೈಯಕ್ತಿಕವಾಗಿ ಶುಬ್ಮನ್ ಗಿಲ್ ತಿಳಿದಿಲ್ಲ. ಇದು ಹಾಸ್ಯಾಸ್ಪದವಾಗಿದೆ. ನಾನು ಬೆಳಿಗ್ಗೆಯಿಂದ ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿ ಸುಸ್ತಾಗಿದ್ದೇನೆ. ಈ ಗಾಸಿಪ್ ಅನ್ನು ನಿರಾಕರಿಸಲು ನಾನು ಅಂತಿಮವಾಗಿ ಅದನ್ನು ನನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲು ನಿರ್ಧರಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ಮುಂಜಾನೆ ಎದ್ದೆ. ನನಗೆ ಪತ್ರಕರ್ತರಿಂದ ಹಲವು ಫೋನ್ಕಾಲ್ಗಳು ಬಂದವು. ನನ್ನ ಮದುವೆ ಬಗ್ಗೆ ಪ್ರಶ್ನೆ ಕೇಳಿದರು. ಒಂದೊಮ್ಮೆ ನನ್ನ ಜೀವನದಲ್ಲಿ ಏನಾದರೂ ಮುಖ್ಯವಾದುದ್ದು ಘಟಿಸುತ್ತಿದೆ ಎಂದಾದರೆ ನಾನೇ ಬಂದು ಘೋಷಣೆ ಮಾಡುತ್ತೇನೆ. ಈಗ ಹರಿದಾಡುತ್ತಿರುವುದರಲ್ಲಿ ಯಾವುದೇ ನಿಜವಿಲ್ಲ ಎಂದಿದ್ದಾರೆ.
Advertisement