
ಕೆನ್ಸಿಂಗ್ ಟನ್: ಮಂಗಳವಾರ (ಜೂ.04) ಕೆನ್ಸಿಂಗ್ ಟನ್ ಓವಲ್ ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್-ಸ್ಕಾಟ್ ಲ್ಯಾಂಡ್ ನಡುವಿನ ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡಿತು.
ಎರಡೂ ತಂಡಗಳಿಗೆ ತಲಾ 1 ಅಂಕ ನೀಡಲಾಗಿದೆ. ಆರಂಭದಲ್ಲಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ತಲಾ 10 ಓವರ್ ಗಳಿಗೆ ಇಳಿಕೆ ಮಾಡಲಾಗಿತ್ತು. ಈ ವೇಳೆಗೆ ಸ್ಕಾಟ್ ಲ್ಯಾಂಡ್ ವಿಕೆಟ್ ನಷ್ಟವಿಲ್ಲದೇ 90 ರನ್ ಗಳಿಸಿತ್ತು.
ಡಕ್ವರ್ತ್ ಲೂಯೀಸ್ ನಿಯಮದ ಪ್ರಕಾರ ಇಂಗ್ಲೆಂಡ್ ಗೆ 10 ಓವರ್ ಗಳಲ್ಲಿ 109 ರನ್ ಗಳ ಗುರಿ ನೀಡಲಾಯಿತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆಗೆ ಮಳೆ ತೀವ್ರಗೊಂಡ ಪರಿಣಾಮ ಎರಡೂ ತಂಡಗಳಿಗೆ ತಲಾ 1 ರನ್ ನೀಡಲಾಯಿತು.
ಸ್ಕಾಟ್ ಲ್ಯಾಂಡ್ ಮುಂದಿನ ಪಂದ್ಯದಲ್ಲಿ ನಮೀಬಿಯಾವನ್ನು ಇದೇ ಮೈದಾನದಲ್ಲಿ ಎದುರಿಸಲಿದ್ದರೆ, ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ.
Advertisement