
ಪಾಕಿಸ್ತಾನದ ಬ್ಯಾಟ್ಸ್‌ಮನ್ ಅಜಂ ಖಾನ್ ತಮ್ಮ ಬ್ಯಾಟಿಂಗ್ ಮತ್ತು ಫಿಟ್‌ನೆಸ್‌ನಿಂದ ಇತ್ತೀಚಿನ ದಿನಗಳಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸ್ಟೇಡಿಯಂನಲ್ಲಿರುವ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡುವ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಗುರುವಾರ ಅಮೆರಿಕ ವಿರುದ್ಧ ನಡೆದ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅಜಂ ಖಾನ್ ಗೋಲ್ಡನ್ ಡಕ್ ಔಟಾದರು. ಇದಾದ ಬಳಿಕ ಅಜಂ ಖಾನ್ ಪೆವಿಲಿಯನ್ ಕಡೆಗೆ ಮರಳಲು ಆರಂಭಿಸಿದಾಗ ಮಾರ್ಗಮಧ್ಯೆ ಅಭಿಮಾನಿಯೊಂದಿಗೆ ಜಗಳವಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿ ಅಜಂ ಖಾನ್ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಮೈದಾನಕ್ಕೆ ಬಂದ ತಕ್ಷಣ ಕ್ರೀಡಾಂಗಣದಲ್ಲಿ ಕುಳಿತಿದ್ದ ಪ್ರೇಕ್ಷಕರು ಕೊಬ್ಬಿದ ಆನೆ ಎಂದು ಕೂಗಲಾರಂಭಿಸಿದರು. ಇದಾದ ಬಳಿಕ ಮೈದಾನದಿಂದ ಔಟಾದ ಬಳಿಕ ವಾಪಾಸ್ಸಾಗುವಾಗ ಅಭಿಮಾನಿಯೊಬ್ಬರು ಕೂಡ ಏನೋ ಹೇಳಿದ್ದರು. ಬಳಿಕ ಆತನೊಂದಿಗೆ ಜಗಳವಾಡಿದ್ದಾನೆ.
ಅಭಿಮಾನಿ ಪಾಕ್ ಕ್ರಿಕೆಟಿಗನಿಗೆ ಏನು ಹೇಳಿದರು ಎಂಬುದು ಸ್ಪಷ್ಟವಾಗಿಲ್ಲವಾದರೂ, ಅವರು ಅಜಮ್ ಅವರ ಫಿಟ್ನೆಸ್ ಬಗ್ಗೆ ಕೆಣಕಿರುತ್ತಾರೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ಅಜಂ ತುಂಬಾ ಕೋಪಗೊಂಡಿದ್ದನ್ನು ಚಿತ್ರಗಳಲ್ಲಿ ಕಾಣಬಹುದು. ಇದರೊಂದಿಗೆ ಅನೇಕ ಅಭಿಮಾನಿಗಳು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂಗೆ ಅಜಂ ಖಾನ್ ಅವರ ಪೋಸ್ಟರ್‌ಗಳನ್ನು ಹಿಡಿದು ಬಂದಿದ್ದು ಅದರಲ್ಲಿ ತಿನ್ನುವುದನ್ನು ನಿಲ್ಲಿಸು ಎಂಬ ಪೋಸ್ಟರ್ ಗಳನ್ನು ಪ್ರದರ್ಶಿಸಿದ್ದರು.
ಇತ್ತೀಚಿಗೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ವೀಡಿಯೊ ವೈರಲ್ ಆಗಿತ್ತು. ಇದರಲ್ಲಿ ಅವರು ಅಜಂ ಖಾನ್ ಅವರನ್ನು ಯುನಿಕಾರ್ನ್ ಎಂದು ಕರೆಯುವ ಮೂಲಕ ಕೀಟಲೆ ಮಾಡುತ್ತಿದ್ದರು. ಇದರಿಂದ ತೀವ್ರ ಕೋಪಗೊಂಡ ಆಜಂ ಅಭ್ಯಾಸವನ್ನೇ ತೊರೆದಿದ್ದ ಎನ್ನಲಾಗಿದೆ.
ಅಮೆರಿಕ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಅಮೆರಿಕ ಸಹ 159 ರನ್ ಬಾರಿಸುವ ಮೂಲಕ ಪಂದ್ಯವನ್ನು ಟೈ ಮಾಡಿತ್ತು. ಅಂತಿಮವಾಗಿ ಸೂಪರ್ ಓವರ್ ನಲ್ಲಿ ಅಮೇರಿಕಾ ಪಾಕ್ ಗೆ 19 ರನ್ ಗಳ ಗುರಿ ನೀಡಿತು. ಆದರೆ ಪಾಕ್ 13 ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
Advertisement