
ನವದೆಹಲಿ: ಮುಂದಿನ ತಿಂಗಳು ಆರಂಭವಾಗಲಿರುವ T20 ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಜೊತೆಗೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯಬೇಕು. ರಿಷಭ್ ಪಂತ್ ವಿಕೆಟ್ ಕೀಪರ್ ಆಗಬೇಕು ಎಂದು ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ. ಐಪಿಎಲ್ 2024 ರಲ್ಲಿ ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಆಟಗಾರ ಜೈಸ್ವಾಲ್ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಅರ್ಧಶತಕದೊಂದಿಗೆ 152 ಸ್ಟ್ರೈಕ್ ರೇಟ್‌ನಲ್ಲಿ 348 ರನ್ ಗಳಿಸಿದ್ದಾರೆ.
ಇನ್ನೂ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ ಮೂರು ಮತ್ತು ಸೂರ್ಯ ಕುಮಾರ್ ಯಾದವ್ ನಾಲ್ಕನೇ ಬ್ಯಾಟಿಂಗ್ ಕ್ರಮದಲ್ಲಿ ಆಡಬೇಕು ಎಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಹೇಳಿದ್ದಾರೆ. ಐಪಿಎಲ್ ನಲ್ಲಿ ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ, ಎಡಗೈ ಬ್ಯಾಟರ್ ಕೂಡಾ ಆಗಿರುವ ರಿಷಭ್ ಪಂತ್ ಅವರಿಗೆ ತಂಡ ಗೆಲ್ಲಿಸುವ ಸಾಮರ್ಥ್ಯವಿದೆ. ಈ ಹಿಂದೆ ಕೂಡಾ ಅದನ್ನು ಸಾಬೀತುಪಡಿಸಿದ್ದು, ಅವರ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.ಇಂಗ್ಲೆಂಡ್ ನಲ್ಲಿ 2007ರಲ್ಲಿ ನಡೆದ ಟಿ-20 ವಿಶ್ವಕಪ್ ನಲ್ಲಿ ಸ್ಟುವರ್ಟ್ ಬ್ರಾಡ್ ಗೆ ಯುವಿ ಆರು ಸಿಕ್ಸರ್ ಬಾರಿಸಿದ್ದರು.
ಐಪಿಎಲ್ ನಲ್ಲಿ ಬ್ಯಾಟಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿದ ಉಪ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸಿರುವ ಯುವರಾಜ್ ಸಿಂಗ್, ಅವರು ಭಾರತ ತಂಡಕ್ಕೆಸಾಕಷ್ಟು ಕೊಡುಗೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಬೌಲಿಂಗ್ ಪ್ರಮುಖವಾಗಿದೆ. ಅವರು ಈ ವಿಶ್ವಕಪ್ ನಲ್ಲಿ ವಿಶೇಷ ಸಾಧನೆ ಮಾಡುವ ವಿಶ್ವಾಸವಿದೆ ಎಂದರು. ಐಪಿಎಲ್ ನಲ್ಲಿ 14 ಪಂದ್ಯಗಳಲ್ಲಿ 162. 29ಸ್ಟ್ರೈಕ್ ರೇಟ್ ನಲ್ಲಿ 396 ರನ್ ಗಳಿಸಿರುವ ಸಿಎಸ್ ಕೆ ಆಲ್ ರೌಂಡರ್ ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಜೂನ್ 9 ರಂದು ನ್ಯೂಯಾರ್ಕ್ ನಲ್ಲಿ ಐರ್ಲೆಂಡ್ ವಿರುದ್ಧ ಅಭಿಯಾನ ಆರಂಭಿಸಲಿರುವ ಭಾರತ, ನಾಲ್ಕು ದಿನಗಳ ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.
Advertisement