IPL 2024: RR ವಿರುದ್ಧ ಗೆದ್ದ ಹೈದರಾಬಾದ್ ಫೈನಲ್ ಗೆ ಎಂಟ್ರಿ: KKR ವಿರುದ್ಧ SRH ಹಣಾಹಣಿ!

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಸನ್ ರೈಸರ್ಸ್ ಹೈದರಾಬಾದ್
ಸನ್ ರೈಸರ್ಸ್ ಹೈದರಾಬಾದ್

ಐಪಿಎಲ್ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಚೆನ್ನೈನ ಚೆಪಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಬಾರಿಸಿತ್ತು. ಹೈದರಾಬಾದ್ ನೀಡಿದ 176 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಗಿದ್ದು 36 ರನ್ ಗಳಿಂದ ಸೋಲು ಕಂಡಿದೆ.

ಹೈದರಾಬಾದ್ ಪರ ಟ್ರಾವಿಸ್ ಹೆಡ್ 34, ಅಭಿಶೇಕ್ ಶರ್ಮಾ 12, ರಾಹುಲ್ ತ್ರಿಪಾಠಿ 37 ಮತ್ತು ಹೆನ್ರಿಚ್ ಕ್ಲಾಸೆನ್ 50 ರನ್ ಬಾರಿಸಿದ್ದರು. ಆರ್ ಆರ್ ಪರ ಬೌಲಿಂಗ್ ನಲ್ಲಿ ಟ್ರೆಂಟ್ ಬೋಲ್ಟ್ ಮತ್ತು ಆವೇಶ್ ಖಾನ್ ತಲಾ 3 ವಿಕೆಟ್ ಪಡೆದಿದ್ದರೆ ಸಂದೀಪ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್
IPL 2022 ವೇಳೆ ವೈಫಲ್ಯದಿಂದ ಹೊರಬರಲು ಉತ್ಸಾಹ ತುಂಬಿದ್ದು ಇವರೇ! ಡಿಕೆ ಜೊತೆಗಿನ ವಿಶೇಷ ಬಾಂಧವ್ಯ ಸ್ಮರಿಸಿದ ಕೊಹ್ಲಿ

ರಾಜಸ್ಥಾನ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 42, ಟಾಮ್ ಕೊಹ್ಲೆರ್ 10 ರನ್ ಗಳಿಸಿ ಔಟಾದರೆ ಧ್ರುವ್ ಜುರೆಲ್ ಏಕಾಂಗಿ ಹೋರಾಟ ನಡೆಸಿ ಅಜೇಯ 56 ರನ್ ಬಾರಿಸಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಹೈದರಾಬಾದ್ ಪರ ಶಹಬಾಜ್ ಅಹಮದ್ 3 ವಿಕೆಟ್ ಪಡೆದಿದ್ದರೆ ಅಭಿಶೇಕ್ ಶರ್ಮಾ 2 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com