ಹಾರ್ದಿಕ್ ಪಾಂಡ್ಯ ಜೊತೆ ವಿಚ್ಛೇದನ ವದಂತಿ ಬೆನ್ನಲ್ಲೇ ದಿಶಾ ಪಟಾಣಿ ಗೆಳೆಯನ ಜೊತೆ ಕಾಣಿಸಿಕೊಂಡ ನತಾಶ, ವಿಡಿಯೋ!

ವಿಚ್ಛೇದನದ ಸುದ್ದಿ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಸುದ್ದಿಯಲ್ಲಿರುವಂತೆ ಮಾಡಿದೆ. ಆದರೆ, ಈ ಬಗ್ಗೆ ಎರಡೂ ಕಡೆಯಿಂದ ಇನ್ನೂ ಏನೂ ಹೇಳಿಲ್ಲ. ಏತನ್ಮಧ್ಯೆ, ನತಾಶಾ ಅವರ ವೀಡಿಯೊಂದು ವೈರಲ್ ಆಗಿದ್ದು ಅದರಲ್ಲಿ ಅವರು ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಾರ್ದಿಕ್ ಪಾಂಡ್ಯ-ನತಾಶಾ
ಹಾರ್ದಿಕ್ ಪಾಂಡ್ಯ-ನತಾಶಾ
Updated on

ವಿಚ್ಛೇದನದ ಸುದ್ದಿ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಸುದ್ದಿಯಲ್ಲಿರುವಂತೆ ಮಾಡಿದೆ. ಆದರೆ, ಈ ಬಗ್ಗೆ ಎರಡೂ ಕಡೆಯಿಂದ ಇನ್ನೂ ಏನೂ ಹೇಳಿಲ್ಲ. ಏತನ್ಮಧ್ಯೆ, ನತಾಶಾ ಅವರ ವೀಡಿಯೊಂದು ವೈರಲ್ ಆಗಿದ್ದು ಅದರಲ್ಲಿ ಅವರು ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ, ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ನತಾಶಾ ಪಿಂಕ್ ಬಣ್ಣದ ಶರ್ಟ್ ಜೊತೆಗೆ ಶಾರ್ಟ್ಸ್ ಧರಿಸಿದ್ದಾರೆ. ಈ ಸಮಯದಲ್ಲಿ ಗಮನಿಸಬೇಕಾದ ವಿಷಯವೆಂದರೆ ನತಾಶಾ ಒಬ್ಬಂಟಿಯಾಗಿರಲಿಲ್ಲ. ಆಕೆ ಜೊತೆಯಲ್ಲಿ ವ್ಯಕ್ತಿಯೊಬ್ಬರು ಇದ್ದರು. ಇದೀಗ ಆತ ಯಾರೆಂಬ ಚರ್ಚೆ ಶುರುವಾಗಿದೆ.

ನತಾಶಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಪರಾಜಿಗಳು ಸಹ ನತಾಶ ಕಂಡಾಕ್ಷಣ ಅವರ ವಿಚ್ಛೇದನದ ಬಗ್ಗೆ ಕೇಳಲು ಪ್ರಯತ್ನಿಸಿದರು. ಆದರೆ ನತಾಶಾ ಈ ಪ್ರಶ್ನೆಗಳಿಗೆ ಉತ್ತರಿಸದೆ ನತಾಶಾ ಧನ್ಯವಾದಗಳನ್ನು ಹೇಳಿ ಹೊರನಡೆದಳು. ಇದೇ ವೇಳೆ ನತಾಶಾ ಜೊತೆಗೆ ವ್ಯಕ್ತಿಯೊಬ್ಬರು ಕೂಡ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.

ಈ ವ್ಯಕ್ತಿ ಬೇರೆ ಯಾರೂ ಅಲ್ಲ, ಬಾಲಿವುಡ್ ಬೆಡಗಿ ದಿಶಾ ಪಟಾನಿಯ ವದಂತಿಯ ಗೆಳೆಯ. ದಿಶಾ ಅವರ ವದಂತಿಯ ಭಾಯ್ ಫ್ರೆಂಡ್ ನತಾಶಾ ವಿಹಾರಕ್ಕೆ ಹೋಗಿದ್ದರು. ಈ ಸಮಯದಲ್ಲಿ, ನತಾಶಾ ಪಾಪರಾಜಿ ಕ್ಯಾಮೆರಾದ ಕಡೆಗೆ ನೋಡಿದಳು ಆದರೆ ಏನನ್ನೂ ಹೇಳಲಿಲ್ಲ. ವಿಚ್ಛೇದನದ ವಿಷಯವಾಗಿ ಆಕೆ ಏನನ್ನೂ ಹೇಳಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸಿತು. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ, ನತಾಶಾ ಮತ್ತೊಬ್ಬ ಹುಡುಗನೊಂದಿಗೆ ನೋಡಿದ ನಂತರ ಅಭಿಮಾನಿಗಳು ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದು ತಪ್ಪು ಎಂದು ಒಬ್ಬರು ಹೇಳಿದರು. ನತಾಶಾ ಹಾರ್ದಿಕ್ ವೃತ್ತಿಜೀವನವನ್ನು ಸಹ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹಾರ್ದಿಕ್ ಪಾಂಡ್ಯ-ನತಾಶಾ
IPL 2024: ನಾಳೆ ಕೆಕೆಆರ್ ವಿರುದ್ಧ ಫೈನಲ್ ಪಂದ್ಯ: ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತೇವೆ- ಭುವನೇಶ್ವರ್ ಕುಮಾರ್

ವಿಚ್ಛೇದನದ ಸುದ್ದಿಯ ನಡುವೆ, ಹಾರ್ದಿಕ್ ಪಾಂಡ್ಯ ಈಗ ತಮ್ಮ ಆಸ್ತಿಯಲ್ಲಿ 70 ಪ್ರತಿಶತವನ್ನು ತಮ್ಮ ಪತ್ನಿ ನತಾಶಾಗೆ ನೀಡಬೇಕಾಗುತ್ತದೆ ಎಂಬ ವರದಿಗಳೂ ಇವೆ. ಆದರೆ, ಈ ಸುದ್ದಿಗಳಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎಂಬುದು ಸಮಯ ಬಂದಾಗ ಮಾತ್ರ ತಿಳಿಯಲಿದೆ. ಸದ್ಯ ಇಬ್ಬರ ನಡುವೆ ಎಲ್ಲವೂ ಸರಿ ಹೋಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com