ಭಾರತದ ಸ್ಥಿತಿ ನೋಡ್ತಿದ್ದರೆ ಪಾಕ್ ಸಹ ಟೀಂ ಇಂಡಿಯಾವನ್ನು ಸುಲಭವಾಗಿ ಸೋಲಿಸಬಹುದು: ವಾಸಿಂ ಅಕ್ರಂ

ಪಾಕ್ ನ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ ನೀಡಿರುವ ಹೇಳಿಕೆ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ. ಈಗ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸ್ಪಿನ್ ಟ್ರ್ಯಾಕ್‌ನಲ್ಲಿ ಆಡಿದರೆ ಗೆಲ್ಲಬಹುದು ಎಂದು ವಾಸಿಂ ಅಕ್ರಂ ಹೇಳಿದ್ದಾರೆ.
Wasim Akram
ವಾಸಿಂ ಅಕ್ರಂ
Updated on

ಇಸ್ಲಾಮಾಬಾದ್: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತವರಿನಲ್ಲಿ ವೈಟ್ ವಾಶ್ ಎದುರಿಸಿದೆ. ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಟೀಂ ಇಂಡಿಯಾವನ್ನು 3-0 ಅಂತರದಿಂದ ಸೋಲಿಸಿದೆ. ಈ ಸೋಲಿನ ನಂತರ ಭಾರತ ತಂಡ ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿದೆ. ಇಂತಹ ಪರಿಸ್ಥಿತಿಯನ್ನು ಬಳಸಿಕೊಳ್ಳುವಲ್ಲಿ ನೆರೆಯ ರಾಷ್ಟ್ರ ಪಾಕಿಸ್ತಾನ ಹಿಂದೆ ಸರಿದಿಲ್ಲ. ಭಾರತದ ಈ ಸೋಲಿನ ಬಗ್ಗೆ ಪಾಕಿಸ್ತಾನದ ಹಲವು ಕ್ರಿಕೆಟ್ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪಾಕ್ ನ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ ನೀಡಿರುವ ಹೇಳಿಕೆ ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ. ಈಗ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸ್ಪಿನ್ ಟ್ರ್ಯಾಕ್‌ನಲ್ಲಿ ಆಡಿದರೆ ಗೆಲ್ಲಬಹುದು ಎಂದು ವಾಸಿಂ ಅಕ್ರಂ ಹೇಳಿದ್ದಾರೆ. ಆಸ್ಟ್ರೇಲಿಯ ಮತ್ತು ಪಾಕಿಸ್ತಾನದ ಮೊದಲ ODI ಪಂದ್ಯದ ವೇಳೆ ಕಾಮೆಂಟರಿ ಬಾಕ್ಸ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಈ ಸಮಯದಲ್ಲಿ, ಮೈಕೆಲ್ ವಾನ್ ಮತ್ತು ವಾಸಿಂ ಅಕ್ರಂ ಒಟ್ಟಿಗೆ ಕಾಮೆಂಟರಿ ಮಾಡುತ್ತಿದ್ದರು. ಈ ವೇಳೆ ಭಾರತದ ಸೋಲಿನ ಬಗ್ಗೆ ಚರ್ಚಿಸಿದ ವಾನ್, ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯನ್ನು ನೋಡಲು ಬಯಸುತ್ತೇನೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ವಾಸಿಂ ಅಕ್ರಂ, ಅದು ನಡೆದರೆ ದೊಡ್ಡ ಸರಣಿಯಾಗಲಿದೆ. ಇದು ಎರಡು ಕ್ರಿಕೆಟ್ ಹುಚ್ಚು ದೇಶಗಳಿಗೂ ಒಳ್ಳೆಯದು ಎಂದರು. ಟರ್ನಿಂಗ್ ಟ್ರ್ಯಾಕ್‌ನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಬಹುದಾ ಎಂದು ವಾನ್ ಕೇಳಿದರು. ಇದಕ್ಕೆ ವಾಸಿಂ ಅಕ್ರಂ, ಸ್ಪಿನ್ನಿಂಗ್ ಟ್ರ್ಯಾಕ್‌ನಲ್ಲಿ ಭಾರತವನ್ನು ಟೆಸ್ಟ್‌ನಲ್ಲಿ ಸೋಲಿಸಲು ಪಾಕಿಸ್ತಾನಕ್ಕೆ ಈಗ ಅವಕಾಶವಿದೆ. ತವರಿನಲ್ಲಿ ನ್ಯೂಜಿಲೆಂಡ್ ಅವರನ್ನು 3-0 ಅಂತರದಿಂದ ಸೋಲಿಸಿದೆ ಎಂದರು.

Wasim Akram
ಆಸ್ಟ್ರೇಲಿಯಾ ಸರಣಿ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಅಶ್ವಿನ್ ಭವಿಷ್ಯ ನಿರ್ಧಾರ?

ಪಾಕಿಸ್ತಾನವು 2021ರ ನಂತರ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಸರಣಿಯನ್ನು ಗೆದ್ದಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ದೊಡ್ಡ ಸೋಲನ್ನು ಎದುರಿಸಬೇಕಾಯಿತು. ಇದಾದ ಬಳಿಕ ಟೀಮ್ ಮ್ಯಾನೇಜ್ ಮೆಂಟ್ ಪ್ರಮುಖ ಬದಲಾವಣೆ ಮಾಡಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಕೆಲ ಸ್ಪಿನ್ನರ್ ಗಳಿಗೆ ಅವಕಾಶ ನೀಡಿತ್ತು. ಪಾಕಿಸ್ತಾನ ತನ್ನ ಸ್ಪಿನ್ನರ್‌ಗಳಾದ ನೋಮನ್ ಅಲಿ ಮತ್ತು ಸಾಜಿದ್ ಖಾನ್ ಅವರ ಬಲದಿಂದ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇವರಿಬ್ಬರೂ ಎರಡು ಪಂದ್ಯಗಳಲ್ಲಿ 40 ವಿಕೆಟ್‌ಗಳಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

2008ರಲ್ಲಿ ಪಾಕಿಸ್ತಾನ ಭಾರತ ಪ್ರವಾಸ ಕೈಗೊಂಡಿತ್ತು. ಅಂದು ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಯ ಟೆಸ್ಟ್ ಸರಣಿಯನ್ನು ನಡೆದಿತ್ತು. ಆ ಸಮಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು 1-0 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com