ಭಾರತದ ಸ್ಟಾರ್ ಸ್ಫೋಟಕ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದರೆ ಆ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವ ಆಟಗಾರ ವೀರೇಂದ್ರ ಸೆಹ್ವಾಗ್. ಸೆಹ್ವಾಗ್ ಅವರ ಪುತ್ರ ಆರ್ಯ ವೀರ್ ಸೆಹ್ವಾಗ್ ಕೂಚ್ ಬೆಹಾರ್ ಟ್ರೋಫಿಯಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ವಿರೇಂದ್ರ ಸೆಹ್ವಾಗ್ ಕ್ರಿಕೆಟ್‌ನ ಎಲ್ಲಾ ಫಾರ್ಮಟ್ ನಲ್ಲಿ ಬ್ಯಾಟಿಂಗ್ ಮಾಡಿದ ಆಟಗಾರ. ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ರೀತಿ ಬ್ಯಾಟ್ ಮಾಡಿದ ಪ್ಲೇಯರ್ ಸೆಹ್ವಾಗ್. ಇವರು ಭಾರತದ ಪರ ತ್ರಿಪಲ್ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಮೂರನೂರಕ್ಕೂ ಹೆಚ್ಚು ರನ್‌ಗಳನ್ನು ಎರಡು ಬಾರಿ ಬಾರಿಸಿದ ವಿಶ್ವದ ಕೆಲವೇ ಕೆಲವು ಆಟಗಾರರಲ್ಲಿ ಸೆಹ್ವಾಗ್ ಗೆ ಸ್ಥಾನವಿದೆ. ಈಗ ಅವರ ಹಾದಿಯನ್ನೇ ಅವರ ಮಗ ಕೂಡ ಅನುಸರಿಸುತ್ತಿದ್ದಾರೆ. ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಸ್ಫೋಟಕ ದ್ವಿಶತಕ ಸಿಡಿಸಿದ್ದಾರೆ. ಆದರೆ, ತ್ರಿಶತಕದಿಂದ ವಂಚಿತರಾದರು.
ತ್ರಿಶತಕ ವಂಚಿತ ಕೂಚ್ ಬೆಹಾರ್ ಟ್ರೋಫಿ ಪಂದ್ಯದ ಎರಡನೇ ದಿನ ದೆಹಲಿ ಪರ ಆರ್ಯವೀರ್ ಅವರು ಸ್ಥಿರ ಪ್ರದರ್ಶನ ನೀಡಿದರು. ಶಿಲ್ಲಾಂಗ್‌ನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಆರ್ಯವೀರ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು ಜಸ್ಟ್ 3 ರನ್‌ಗಳಿಂದ ತ್ರಿಶತಕ ತಪ್ಪಿಸಿಕೊಂಡರು. ಆರ್ಯವೀರ್ 297 ರನ್ ಗಳಿಸಿ ಔಟಾದರು. ಅವರು ತಮ್ಮ ತಂದೆಯಂತೆ ಟ್ರಿಪಲ್ ಸೆಂಚುರಿ ಗಳಿಸಲು ಸಾಧ್ಯವಾಗಲಿಲ್ಲ. ಕೂಚ್ ಬೆಹರ್ ಟ್ರೋಫಿಯು ಅಂಡರ್-19 ವಯೋಮಿತಿಯ ಪ್ಲೇಯರ್‌ಗಳಿಗೆ ಬಿಸಿಸಿಐ ಆಯೋಜಿಸಿರುವ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಮೇಘಾಲಯ ವಿರುದ್ಧ ಅಬ್ಬರಿಸಿ ಬೊಬ್ಬರಿದ ಆರ್ಯವೀರ್ಗೆ ತಂದೆ ವೀರೇಂದ್ರ ಸೆಹ್ವಾಗ್ ಸೇರಿದಂತೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರ್ಯವೀರ್ 309 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 51 ಬೌಂಡರಿಗಳ ನೆರವಿನಿಂದ 297 ರನ್ ಗಳಿಸಿದ್ದಾರೆ. ಸೆಹ್ವಾಗ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಡಬಲ್ ಸೆಂಚುರಿ ಸಿಡಿಸಿದ್ದು ಹಲವು ದಾಖಲೆಗಳನ್ನು ಬರೆದಿದ್ದಾರೆ. ಆರ್ಯವೀರ್ 297 ರನ್ ಗಳಿಸಿ ಔಟಾದ ಬಳಿಕ ಕೇವಲ 23 ರನ್ಗಳ ಅಂತರದಿಂದ ಆರ್ಯವೀರ್ ಫೆರಾರಿ ಕಾರು ಕಳೆದುಕೊಂಡ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ನನ್ನ 319 ರನ್ಗಳ ದಾಖಲೆ ಮುರಿದರೆ ನಿನಗೆ ಫೆರಾರಿ ಕಾರು ಕೊಡಿಸುವೆ ಎಂದು ಭರವಸೆ ನೀಡಿದ್ದೆ. ಆದರೆ ಇದು ಸಾಧ್ಯವಾಗಿಲ್ಲ ಎಂದು ವೀರು ಹೇಳಿದ್ದಾರೆ. ತಂದೆಯ ದಾಖಲೆ ಮುರಿಯುವ ಅವಕಾಶ ಮತ್ತು ಫೆರಾರಿ ಕಾರು ಪಡೆಯುವ ಎರಡೂ ಅವಕಾಶಗಳನ್ನೂ ಆರ್ಯವೀರ್, ಕಳೆದುಕೊಂಡಿದ್ದಾರೆ. ಅಲ್ಲದೆ, ಮಗನ ಆಟವನ್ನು ಸೆಹ್ವಾಗ್ ಶ್ಲಾಘಿಸಿದ್ದಾರೆ.
Advertisement