ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಶ್ರೇಯಾಂಕದಲ್ಲಿ 5 ನೇ ಸ್ಥಾನಕ್ಕೆ ಮರಳಿದ್ದಾರೆ. 2021ರ ನಂತರ ಮೊದಲ ಬಾರಿಗೆ ರೋಹಿತ್ ಶರ್ಮಾ 5 ನೇ ಸ್ಥಾನಕ್ಕೆ ಮರಾಳಿದ್ದಾರೆ.
ಐಸಿಸಿ ಸೆ.11 ರಂದು ಬ್ಯಾಟ್ಸ್ಮನ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರೋಹಿತ್ ಶರ್ಮಾ ತಂಡದ ಸಹ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ತಮ್ಮ ಸ್ಥಾನಗಳನ್ನು ಏರಿಸಿಕೊಂಡಿದ್ದು, ಅನುಕ್ರಮವಾಗಿ 6, 7 ನೇ ಶ್ರೇಯಾಂಕದಲ್ಲಿದ್ದಾರೆ.
ಸೆ.19 ರಿಂದ ಬಾಂಗ್ಲಾ ವಿರುದ್ಧ 2 ಟೆಸ್ಟ್ ಸರಣಿಗಳಿದ್ದು, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ತಮ್ಮ ಶ್ರೇಯಾಂಕದಲ್ಲಿ ಮತ್ತಷ್ಟು ಸುಧಾರಣೆ ಕಾಣುವ ಸಾಧ್ಯತೆಗಳಿವೆ. ರೋಹಿತ್ ಶರ್ಮಾ ಮತ್ತು ಯಶವಿ ಜೈಸ್ವಾಲ್ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತ ಗೆದ್ದಾಗ ಫಾರ್ಮ್‌ನಲ್ಲಿದ್ದರು. ಇದು ಅವರ ಇತ್ತೀಚಿನ ಟೆಸ್ಟ್ ಸರಣಿ ಕೂಡ ಆಗಿತ್ತು. ಜೈಸ್ವಾಲ್ ಎರಡು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿ ದಾಖಲೆ ಮುರಿಯುವ ಸರಣಿಯಲ್ಲಿ 712 ರನ್ ಗಳಿಸಿದರು. ರೋಹಿತ್ ಕೂಡ ಎರಡು ಶತಕಗಳನ್ನು ಗಳಿಸಿ, 400 ರನ್‌ಗಳನ್ನು ಪೂರೈಸಿದರು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ಇಬ್ಬರು ಬ್ಯಾಟರ್‌ಗಳು ಹೆಚ್ಚಿನ ಸ್ಕೋರ್ ಮಾಡಿದರು.
ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಮುಕ್ತಾಯಗೊಂಡ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಮಿಂಚಿದ್ದ ಶ್ರೀಲಂಕಾ ಬ್ಯಾಟರ್‌ಳ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕ ಏರಿಕೆ ಕಂಡಿದೆ. ಸೋಮವಾರ, ಸೆಪ್ಟೆಂಬರ್ 9 ರಂದು ಲಂಡನ್‌ನ ಓವಲ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಲಂಕಾ 10 ವರ್ಷಗಳಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಪಾಕಿಸ್ತಾನದ ಬಾಬರ್ ಅಜಮ್ ಟಾಪ್ 10 ರೊಳಗೆ ಉಳಿದುಕೊಂಡಿದ್ದಾರೆ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಒಂಬತ್ತನೇ ಸ್ಥಾನದಲ್ಲಿ ದೇಶದ ಅತ್ಯುನ್ನತ ಶ್ರೇಯಾಂಕದ ಬ್ಯಾಟರ್ ಎಂಬ ಸ್ಥಾನಮಾನವನ್ನು ಉಳಿಸಿಕೊಂಡಿದ್ದಾರೆ.
1. ಜೋ ರೂಟ್ - 899 ಅಂಕ
2. ಕೇನ್ ವಿಲಿಯಮ್ಸನ್ - 859 ಅಂಕ
3. ಡೇರಿಲ್ ಮಿಚೆಲ್ - 768 ಅಂಕ
4. ಸ್ಟೀವನ್ ಸ್ಮಿತ್ - 757 ಅಂಕ
5. ರೋಹಿತ್ ಶರ್ಮಾ - 751 ಅಂಕ
6. ಯಶಸ್ವಿ ಜೈಸ್ವಾಲ್ - 740 ಅಂಕ
7. ವಿರಾಟ್ ಕೊಹ್ಲಿ - 737 ಅಂಕ
8. ಉಸ್ಮಾನ್ ಖವಾಜಾ - 728 ಅಂಕ
9. ಮೊಹಮ್ಮದ್ ರಿಜ್ವಾನ್ - 720 ಅಂಕ
10. ಮಾರ್ನಸ್ ಲ್ಯಾಬುಸ್ಚಾಗ್ನೆ - 720 ಅಂಕ
Advertisement