ತಮ್ಮದೇ ಡೀಪ್‌ಫೇಕ್ ವೀಡಿಯೊ ಹಂಚಿಕೊಂಡು ಎಚ್ಚರಿಕೆ ನೀಡಿದ ಸಚಿನ್ ತೆಂಡೂಲ್ಕರ್!
ನವದೆಹಲಿ: ಭಾರತದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ತಮ್ಮ ನಕಲಿ ವೀಡಿಯೊದ ವಿರುದ್ಧ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಈ ಡೀಪ್‌ಫೇಕ್ ವಿಡಿಯೋವನ್ನು ಅಪ್ಲಿಕೇಶನ್ ಪ್ರಚಾರಕ್ಕಾಗಿ ಬಳಸಲಾಗಿದೆ. ಸಚಿನ್ ತೆಂಡೂಲ್ಕರ್ ಅವರ ವೀಡಿಯೋ ಮತ್ತು ಧ್ವನಿಯನ್ನು ಟ್ಯಾಂಪರ್ ಮಾಡಲಾಗಿದ್ದು, ತೆಂಡೂಲ್ಕರ್ ಆ್ಯಪ್ ಅನ್ನು ಪ್ರಚಾರ ಮಾಡುವಂತೆ ತೋರಿಸಲಾಗಿದೆ.
ತಮ್ಮ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ವೀಡಿಯೊ ನಕಲಿ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ಅಂತಹ ಅಪ್ಲಿಕೇಶನ್‌ಗಳು, ವೀಡಿಯೊಗಳು ಮತ್ತು ಜಾಹೀರಾತುಗಳನ್ನು ವರದಿ ಮಾಡಲು ಜನರನ್ನು ಕೇಳಿದರು.
ಸಚಿನ್ ತಮ್ಮ ಟ್ವೀಟ್ ಅನ್ನು ಮಹಾರಾಷ್ಟ್ರ ಸೈಬರ್ ಪೊಲೀಸ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೋ ನಕಲಿ. ತಂತ್ರಜ್ಞಾನದ ದುರ್ಬಳಕೆಯಾಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಪ್ರತಿಯೊಬ್ಬರೂ ಅಂತಹ ವೀಡಿಯೊಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಮಾಡಲು ವಿನಂತಿಸುತ್ತೇನೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಎಚ್ಚರಿಕೆ ಮತ್ತು ದೂರುಗಳಿಗೆ ಸ್ಪಂದಿಸುವ ಅಗತ್ಯವಿದೆ. ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯಲು ಅವರ ಕಡೆಯಿಂದ ತ್ವರಿತ ಕ್ರಮವು ಮುಖ್ಯವಾಗಿದೆ. @GoI_MeitY, @Rajev_GoI ಮತ್ತು @MahaCyber1, ಸಚಿನ್ ಟ್ವೀಟ್ ಮಾಡಿದ್ದಾರೆ.