
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ 2025 ಪಂದ್ಯದಲ್ಲಿ kkR ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ (MI)ಪಾಯಿಂಟ್ಸ್ ಟೇಬಲ್ ನಲ್ಲಿ ಆರನೇ ಸ್ಥಾನಕ್ಕೆ ಏರಿದೆ. ಮತ್ತೊಂದೆಡೆ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಉಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2,266 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ದೆಹಲಿ ಕ್ಯಾಪಿಟಲ್ಸ್ 2, ಲಕ್ನೋ ಸೂಪರ್ ಜೈಂಟ್ಸ್ 3ನೇ ಸ್ಥಾನದಲ್ಲಿದೆ.
ಗುಜರಾತ್ ಟೈಟನ್ಸ್ 4, ಪಂಜಾಬ್ ಕಿಂಗ್ಸ್ 5, ಮುಂಬೈ ಇಂಡಿಯನ್ಸ್ 6, ಚೆನ್ನೈ ಸೂಪರ್ ಕಿಂಗ್ಸ್ 7, ಸನ್ ರೈಸರ್ಸ್ ಹೈದರಾಬಾದ್ 8, ರಾಜಸ್ಥಾನ ರಾಯಲ್ಸ್ 9 ಹಾಗೂ ಕೆಕೆಆರ್ 10 ನೇ ಸ್ಥಾನದಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್‌ನ ನಿಕೋಲಸ್ ಪೂರನ್ ಅವರು 145 ರನ್ ನೊಂದಿಗೆ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ನೂರ್ ಅಹ್ಮದ್ ಅವರು ಅತಿ ಹೆಚ್ಚು ಒಂಬತ್ತು ವಿಕೆಟ್ ಪಡೆಯುವುದರೊಂದಿಗೆ ಪರ್ಪಲ್ ಕ್ಯಾಪ್ ಹೊಂದಿದ್ದಾರೆ.
Advertisement