
ಜೈಪುರ: ಭಾನುವಾರ ನಡೆದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ತವರಿನಲ್ಲಿಯೇ ಸೋಲಲು ಕಾರಣ ಏನೆಂಬುದನ್ನು ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಉತ್ತಮ ಸ್ಕೋರ್ ಮಾಡಿದ್ದರೂ ಪವರ್ ಪ್ಲೇನಲ್ಲಿಯೇ ಪಂದ್ಯ ಕಳೆದುಕೊಂಡೆವು. ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು, ಎದುರಾಳಿ ತಂಡಕ್ಕೆ ವರದಾನವಾಯಿತು ಎಂದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಗೆ ಪವರ್ ಪ್ಲೇನಲ್ಲಿಯೇ ಹೋರಾಟದ ಸೂಚನೆಗಳು ಕಂಡುಬಂದವು. ನಿಧಾನಗತಿಯ ಆರಂಭದ ಹೊರತಾಗಿಯೂ, ಜೈಸ್ವಾಲ್ 75 ಮತ್ತು ರಿಯಾನ್ ಪರಾಗ್ (30) ಮತ್ತು ಧ್ರುವ್ ಜುರೆಲ್ ಅವರ 35 ರನ್ ಗಳ ನೆರವಿನಿಂದ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.
ಅಲ್ಲದೇ ಪರಾಗ್ ನಾಲ್ಕನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ನೀಡಿದ ಕ್ಯಾಚ್ ನ್ನು ಕೈ ಚೆಲ್ಲಿದ್ದರೆ, ಜೈಸ್ವಾಲ್ ಸಾಲ್ಟ್ ನೀಡಿದ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ದುಬಾರಿಯಾಯಿತು.
'ನಿಜವಾಗಿಯೂ 170 ರನ್ ಉತ್ತಮ ಸ್ಕೋರ್ ಎಂದು ನಾನು ಭಾವಿಸುತ್ತೇನೆ. ಹಗಲಿನ ಪಂದ್ಯಗಳಲ್ಲಿ ಟಾಸ್ ಸೋತ ನಂತರ ಮೊದಲ 10 ಓವರ್ ಗಳಲ್ಲಿ ಸುಡು ಬಿಸಿಲಿನಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡುವುದು ಕಷ್ಟವಾಗುತ್ತದೆ. ಪವರ್ ಪ್ಲೇನಲ್ಲಿಯೇ ಅವರು ಪಂದ್ಯ ಗೆದ್ದಿದ್ದಾರೆ ಅನಿಸುತ್ತದೆ. ಕ್ಯಾಚ್ ಕೈ ಚೆಲ್ಲಿದ್ದು ಕೂಡಾ ಅವರಿಗೆ ನೆರವಾಯಿತು.ಅವರು ಕೂಡಾ ನಮ್ಮವರ ಕ್ಯಾಚ್ ಕೈ ಚೆಲ್ಲಿದರು. ನಾವು ಕೂಡಾ ಅವರ ಕ್ಯಾಚ್ ಕೈ ಬಿಟ್ಟೇವು. ನಾನು ಸುಧಾರಿಸಬೇಕು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸ್ಯಾಮ್ಸನ್ ಹೇಳಿದರು.
ಎರಡನೇ ಇನ್ಸಿಂಗ್ಸ್ ನಲ್ಲಿ ಬಾಲ್ ಉತ್ತಮವಾಗಿ ಬರುತಿತ್ತು. ಅವರು ಕೂಡಾ ಉತ್ತಮವಾಗಿ ಆಡುತ್ತಿದ್ದರು. ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಉತ್ತಮವಾಗಿ ಬೌಲಿಂಗ್ ಮಾಡಲು ಮಾತನಾಡಿದ್ದೇವೆ. ಮುಂದಿನ ಪಂದ್ಯದಲ್ಲಿ ಸಕಾರಾತ್ಮಕವಾಗಿ ಬರುತ್ತೇವೆ ಎಂದರು.
Advertisement