
ಜೈಪುರ: ಇಲ್ಲಿನ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.
RCB ಪರ ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ವಿಶಿಷ್ಟ ದಾಖಲೆಯೊಂದನ್ನು ಮಾಡಿದರು. 45 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 62 ರನ್ ಗಳಿಸಿದರು.
ಈ ಸಂದರ್ಭದಲ್ಲಿ ಕೊಹ್ಲಿ ಹೊಡೆದ ಸಿಕ್ಸರ್ ವೊಂದು ಸ್ಟೇಡಿಯಂನಲ್ಲಿದ್ದ ಕ್ಯಾಮರಾ ಮ್ಯಾನ್ ಭುಜಕ್ಕೆ ಹೊಡೆದಿದೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಆತನಿಗೆ ಉಪಚರಿಸಿದ್ದಾರೆ. ಆತನ ಪರಿಸ್ಥಿತಿ ಬಗ್ಗೆ ಇನ್ನೂ ತಿಳಿದುಬರಬೇಕಾಗಿದೆ.
ಇಂದಿನ ಪಂದ್ಯದಲ್ಲಿ ಕೊಹ್ಲಿ, ಟಿ20 ಕ್ರಿಕೆಟ್‌ನಲ್ಲಿ 100ನೇ ಅರ್ಧ ಶತಕ ಸಿಡಿಸಿದ ಎರಡನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಗೆ ಪಾತ್ರರಾದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ 108 ಅರ್ಧಶತಕಗಳನ್ನು ಹೊಂದಿರುವ ಡೇವಿಡ್ ವಾರ್ನರ್ ನಂತರ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
ಐಪಿಎಲ್‌ನಲ್ಲಿ ಕೊಹ್ಲಿ ಗಳಿಸಿರುವ 100 ಅರ್ಧಶತಕಗಳಲ್ಲಿ 57 ಅರ್ಧಶತಕಗಳನ್ನು ಗಳಿಸಿರುವುದರಿಂದ ಅವರ ಗಮನಾರ್ಹ ಸ್ಥಿರತೆ ಮತ್ತು ಆಕ್ರಮಣಕಾರಿ ಆಟದ ಮೇಲೆ ಕೊಹ್ಲಿಯ T20 ಕ್ರಿಕೆಟ್‌ನ ಪಾಂಡಿತ್ಯ ಎದ್ದು ಕಾಣುತ್ತಿದೆ.
ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರ್‌ಸಿಬಿಯ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಇಬ್ಬರೂ ಬಲವಾದ ಅರ್ಧಶತಕದ ಇನ್ನಿಂಗ್ಸ್‌ಗಳನ್ನು ಆಡಿದರು.
Advertisement