
ಲಖನೌ: ಉತ್ತರ ಪ್ರದೇಶದ ಲಖನೌದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ ಲಕ್ನೋ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ರಿವ್ಯೂ ಸಿಸ್ಟಮ್ ಪ್ರಶಂಸೆಗೆ ಪಾತ್ರವಾಯಿತು.
ಹೌದು. ಲಕ್ನೋ ಸೂಪರ್ ಜೈಂಟ್ಸ್ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅನ್ಶುಲ್ ಕಾಂಬೋಜ್ ಫುಲರ್ ಎಸೆತವನ್ನು ನಿಕೋಲಸ್ ಎದುರಿಸುವಲ್ಲಿ ವಿಫಲರಾದರು. ಚೆಂಡು ಅವರ ಪ್ಯಾಡ್‌ಗೆ ಬಡಿಯಿತು. ಸಿಎಸ್‌ಕೆ ಆಟಗಾರರು ಔಟ್‌ಗೆ ಮನವಿ ಮಾಡಿದರು. ಆದರೆ ಅಂಪೈರ್ ನಾಟೌಟ್ ಎಂದರು. ಆಗ ಧೋನಿ ಡಿಆರ್‌ಎಸ್ ಪಡೆದರು.
ಅನ್ಶುಲ್ ಕಾಂಬೋಜ್ ಎಸೆದ ಬಾಲ್ ಪೂರನ್ ಅವರಿಂದ ತಪ್ಪಿಸಿಕೊಂಡು ಲೆಗ್‌ಸ್ಟಂಪ್‌ಗೆ ತಾಗುತ್ತಿರುವುದು ಸ್ಪಷ್ಟವಾಗಿ ಕಂಡಿತು. ಪೂರನ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆಹಾಕಿದರು.ನಿಕೋಲಸ್ ಪೂರನ್ ಪ್ರಸಕ್ತ ಐಪಿಎಲ್‌ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಇವರು 7 ಪಂದ್ಯಗಳಲ್ಲಿ 357 ರನ್ ಕಲೆ ಹಾಕಿದ್ದು, ಆರೆಂಜ್ ಕ್ಯಾಪ್ ಹೊಂದಿದ್ದಾರೆ.
ಇದೇ ಪಂದ್ಯದಲ್ಲಿ ಧೋನಿ ಮತ್ತೊಂದು ಅದ್ಬುತವಾದ ಚಮತ್ಕಾರ ಮಾಡಿದರು. ಕೊನೆಯ ಓವರ್‌ನಲ್ಲಿ ಮತೀಶ್ ಪತಿರಾಣ ಅವರು ಎಸೆದ ಬಾಲ್ ಅಬ್ದುಲ್ ಸಮದ್ ಅವರಿಗೆ ಸಿಗಲಿಲ್ಲ. ಆದರೆ ಸಮದ್ ರಿಷಭ್ ಪಂತ್ ಅವರಿಗೆ ಸ್ಟ್ರೈಕ್ ನೀಡುವ ಭರಾಟೆಯಲ್ಲಿ ಸಿಂಗಲ್ ರನ್‌ಗೆ ಓಡಿದರು. ಆದರೆ ವಿಕೆಟ್ ಹಿಂದೆ ಇದ್ದ ಧೋನಿ ಚೆಂಡನ್ನು ಹಿಡಿದು, ಥ್ರೋ ಮಾಡಿದರು. ಚೆಂಡು ನೇರವಾಗಿ ಎಂಡನ್ ಸ್ಟಂಪ್ಸ್ ಎಗುರಿಸಿತು. ಸಮದ್ ಬ್ಯಾಟ್ ಕ್ರೀಸ್‌ನಲ್ಲಿ ಇಡುವ ಮುನ್ನವೇ ಸ್ಟಂಪ್ಸ್‌ಗೆ ಚೆಂಡು ಬಡೆಯಿತು. ಅಬ್ದುಲ್ ಸಮದ್ ಪೆವಿಲಿಯನ್ ದಾರಿ ಹಿಡಿದರು.
Advertisement