
ಇಸ್ಲಾಮಾಬಾದ್: ಓವಲ್ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಮೊಹಮ್ಮದ್ ಸಿರಾಜ್ ಅವರನ್ನು ಪಾಕಿಸ್ತಾನದ ಲೆಜೆಂಡರಿ ವೇಗಿ ವಾಸಿಂ ಅಕ್ರಮ್ ಹಾಡಿ ಹೊಗಳಿದ್ದಾರೆ. ಸಿರಾಜ್ ಇನ್ನು ಮುಂದೆ ತಂಡದಲ್ಲಿ ಬೆಂಬಲ ಬೌಲರ್ ಅಲ್ಲ ( support bowler) ಎಂದು ಹೇಳಿದ್ದಾರೆ.
ಸಿರಾಜ್ ಸರಣಿಯ ಅಂತಿಮ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದರು. ಆ ಮೂಲಕ ಭಾರತ ಆರು ರನ್‌ಗಳಿಂದ ರೋಚಕ ಗೆಲುವು ಸಾಧಿಸಿ, ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು.
ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನಾಡಿದ ಜಸ್ಪ್ರೀತ್ ಬೂಮ್ರಾ, ಅವರು ಆಡಿದ ಐದು ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದರು. ಇದಕ್ಕೆ ಪೂರಕವಾಗಿ ಸಿರಾಜ್ ಸರಣಿಯಲ್ಲಿ ಒಟ್ಟು 185.3 ಓವರ್ ಬೌಲಿಂಗ್ ಮಾಡಿದರು.
ಗೆಲುವಿನ ಹಸಿವು, ಉತ್ಸಾಹದಿಂದ ತುಂಬಿದ್ದ ಸಿರಾಜ್: ಸಿರಾಜ್ ಹಸಿವು ಮತ್ತು ಉತ್ಸಾಹದಿಂದ ತುಂಬಿದ್ದರು ಎಂದು ಹೇಳಿದ ಅಕ್ರಂ, ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅವರ ಫಿಟ್‌ನೆಸ್ ಮತ್ತು ಮಾನಸಿಕ ಶಕ್ತಿಯನ್ನು ಶ್ಲಾಘಿಸಿದ್ದಾರೆ.
ಸಿರಾಜ್ ಹಸಿವು ಮತ್ತು ಉತ್ಸಾಹದಿಂದ ತುಂಬಿದ್ದರು. ಇದು ನಂಬಲಾಗದ ಪ್ರಯತ್ನವಾಗಿತ್ತು. ಐದು ಟೆಸ್ಟ್‌ಗಳಲ್ಲಿ ಸುಮಾರು 186 ಓವರ್‌ಗಳ ಬೌಲಿಂಗ್ ಮಾಡುವುದು ಮತ್ತು ಅಂತಿಮ ದಿನದಲ್ಲಿ ಇನ್ನೂ ಅತ್ಯುತ್ತಮ ಪ್ರದರ್ಶನ ನೀಡುವುದು ಗಮನಾರ್ಹವಾದ ಫಿಟ್ ನೆಸ್ ಮತ್ತು ಮಾನಸಿಕ ಶಕ್ತಿಯನ್ನು ತೋರಿಸುತ್ತದೆ. ಅವರು ಇನ್ನು ಮುಂದೆ ಕೇವಲ ಸಪೋರ್ಟರ್ ಬೌಲರ್ ಅಲ್ಲ" ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಅಕ್ರಮ್ ಹೇಳಿದರು.
4 ನೇ ದಿನದಂದು ಹ್ಯಾರಿ ಬ್ರೂಕ್ ಅವರ ಕ್ಯಾಚ್ ಅನ್ನು ಕೈಬಿಟ್ಟರೂ ತನ್ನ ಆಸಕ್ತಿ, ಉತ್ಸಾಹವನ್ನು ಸಿರಾಜ್ ಕಳೆದುಕೊಳ್ಳಲಿಲ್ಲ. ಇದು ಒಬ್ಬ ಹೋರಾಟಗಾರನ ಹೆಗ್ಗುರುತು ಆಗಿತ್ತು. ಟೆಸ್ಟ್ ಕ್ರಿಕೆಟ್ ಜೀವಂತವಾಗಿದ್ದು, ಅದು ಉತ್ಸಾಹ ನೀಡುತ್ತಲೇ ಇರುತ್ತದೆ ಎಂದರು.
ಓವರ್ ಪಂದ್ಯಕ್ಕೆ ತಿರುವು ನೀಡಿದ ಸಿರಾಜ್: ಅಂತಿಮ ದಿನ ಭಾರತಕ್ಕೆ ನಾಲ್ಕು ವಿಕೆಟ್‌ಗಳ ಅಗತ್ಯವಿತ್ತು. ಇನ್ನೊಂದೆಡೆ ಇಂಗ್ಲೆಂಡ್ ಗೆದ್ದು, ಸರಣಿ ವಶಕ್ಕೆ 35 ರನ್‌ಗಳ ಅಗತ್ಯವಿತ್ತು. 5 ನೇ ದಿನದಂದು ಟಿವಿಗೆ ಅಂಟಿಕೊಂಡಿದ್ದೆ ಮತ್ತು ಶೇ. 60 ರಷ್ಟು ಭಾರತ ಗೆಲ್ಲುತ್ತದೆ ಅಂದುಕೊಂಡಿದ್ದೆ. ಭಾರತಕ್ಕೆ ಆರಂಭಿಕ ಪ್ರಗತಿಯ ಅಗತ್ಯವಿತ್ತು. ಅದನ್ನು ಸಿರಾಜ್ ಒದಗಿಸಿದರು. ನಾನು ಕೆಲಸವಿಲ್ಲದಿದ್ದಾಗ ಕ್ರಿಕೆಟ್ ನೋಡುವುದು ಅಪರೂಪ, ಆದರೆ ಕೊನೆಯ ದಿನ ಸಂಪೂರ್ಣವಾಗಿ ಕ್ರಿಕೆಟ್ ವೀಕ್ಷಿಸಿದ್ದಾಗಿ ಎಂದು ಅಕ್ರಮ್ ಹೇಳಿದರು.
ಬೂಮ್ರಾ ಕೈಬಿಟ್ಟದ್ದು ಸರಿ ಎಂದ ಅಕ್ರಂ: ಅಂತಿಮ ಟೆಸ್ಟ್ ನಲ್ಲಿ ಬುಮ್ರಾಗೆ ವಿಶ್ರಾಂತಿ ನೀಡುವ ಭಾರತದ ನಿರ್ಧಾರವನ್ನು ಶ್ಲಾಘಿಸಿದ ಅಕ್ರಂ, ದೊಡ್ಡ ಪಂದ್ಯಾವಳಿಗಳು ಮುಂದಿರುವಾಗ ಸ್ಟಾರ್ ವೇಗಿಗಳ ಫಿಟ್‌ನೆಸ್ ಅತ್ಯಗತ್ಯವಾಗಿರುತ್ತದೆ."ತಮ್ಮ ಅತ್ಯುತ್ತಮ ಬೌಲರ್‌ಗೆ ವಿಶ್ರಾಂತಿ ನೀಡಲು ಕೆಚ್ಚೆದೆಯ ತಂಡ ಬೇಕು. ಆದರೆ ಭಾರತಕ್ಕೆ ಇತರ ಬೌಲರ್ ಗಳಿದ್ದರು. ಅದಕ್ಕಾಗಿ ಆ ಯೋಜನೆಯು ಸಂಪೂರ್ಣವಾಗಿ ಕೆಲಸ ಮಾಡಿದೆ" ಎಂದು ಅವರು ಹೇಳಿದರು.
"2025 ರಲ್ಲಿ ಏಷ್ಯಾ ಕಪ್ ಮತ್ತು 2026 ರಲ್ಲಿ T20 ವಿಶ್ವಕಪ್ ಬರಲಿದ್ದು, ಈ ರೀತಿಯ ದೂರದೃಷ್ಟಿಯು ಅತ್ಯಗತ್ಯವಾಗಿದೆ. ಬುಮ್ರಾ ಪ್ರಮುಖ ಬೌಲರ್ ಆಗಿದ್ದು, ಅವರನ್ನು ಉತ್ತಮವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಮುಂದಿನ ಪಂದ್ಯ ಏಷ್ಯಾ ಕಪ್ ಆಗಿದೆ.
Advertisement