IPL: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ

ಕಳೆದ ವರ್ಷವಷ್ಟೇ ಅಂದರೆ ಸೆಪ್ಟೆಂಬರ್ 6ರಂದು ಬಹು-ವರ್ಷದ ಒಪ್ಪಂದದಲ್ಲಿ 52 ವರ್ಷದ ರಾಹುಲ್ ದ್ರಾವಿಡ್ ರಾಜಸ್ತಾನ ರಾಯಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದರು.
Rahul Dravid
ರಾಹುಲ್ ದ್ರಾವಿಡ್
Updated on

ಐಪಿಎಲ್ 2026 ಕ್ಕೆ ಮೊದಲು ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ದೃಢಪಡಿಸಿದೆ. ಆ ಮೂಲಕ ರಾಹುಲ್ ದ್ರಾವಿಡ್ ಅವರ ತಂಡದೊಂದಿಗಿನ ಎರಡನೇ ಅವಧಿ ಹಠಾತ್ ಅಂತ್ಯಗೊಂಡಿದೆ.

ಕಳೆದ ವರ್ಷವಷ್ಟೇ ಅಂದರೆ ಸೆಪ್ಟೆಂಬರ್ 6ರಂದು ಬಹು-ವರ್ಷದ ಒಪ್ಪಂದದಲ್ಲಿ 52 ವರ್ಷದ ರಾಹುಲ್ ದ್ರಾವಿಡ್ ರಾಜಸ್ತಾನ ರಾಯಲ್ಸ್ ತಂಡದ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದರು. ರಾಹುಲ್ ದ್ರಾವಿಡ್ ಅನೇಕ ವರ್ಷಗಳಿಂದ ರಾಯಲ್ಸ್ ಚಾಲೆಂಜ್ ತಂಡದ ಕೇಂದ್ರಬಿಂದುವಾಗಿದ್ದರು. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ.

ತಂಡದೊಳಗೆ ಬಲವಾದ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರ್ಯಾಂಚೈಸ್ ಸಂಸ್ಕೃತಿಯ ಬಗ್ಗೆ ಅಳಿಸಲಾಗದ ಗುರುತು ಬಿಟ್ಟಿದೆ ಎಂದು ರಾಜಸ್ತಾನ ರಾಯಲ್ಸ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2026 ರ ಐಪಿಎಲ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಇದೆಲ್ಲದರ ನಡುವೆ ಇದೀಗ ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಆಘಾತ ಎದುರಾಗಿದೆ.

ರಾಯಲ್ಸ್ ಪರ 46 ಪಂದ್ಯಗಳನ್ನು ಆಡಿರುವ ಭಾರತದ ಮಾಜಿ ನಾಯಕ, ರಾಷ್ಟ್ರೀಯ ತಂಡದೊಂದಿಗೆ ಕ್ರಿಕೆಟ್ ಪಂದ್ಯದಲ್ಲಿ ಆಡುವುದಕ್ಕೆ ನಿವೃತ್ತಿ ಹೇಳಿದ ನಂತರ ಅಧಿಕಾರ ವಹಿಸಿಕೊಂಡಿದ್ದರು.

Rahul Dravid
'ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ...': 'ಇಂಪ್ಯಾಕ್ಟ್ ಪ್ಲೇಯರ್' ರೂಲ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದು...

2025 ರ ಐಪಿಎಲ್ ಸೀಸನ್ ರಾಜಸ್ತಾನ ತಂಡಕ್ಕೆ ನಿರಾಶಾದಾಯಕವಾಗಿತ್ತು. ರಾಹುಲ್ ದ್ರಾವಿಡ್ ನೇತೃತ್ವದಲ್ಲಿ, ರಾಜಸ್ಥಾನ್ ತಂಡ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳನ್ನು ಗಳಿಸಿತು, ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿತು, ನಿವ್ವಳ ರನ್ ದರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ್ನು ಮೀರಿಸಿತು. ಟಿ 20 ವಿಶ್ವಕಪ್ ನಂತರ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರೂ ವಿಕ್ರಮ್ ರಾಥೋರ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಕರೆತಂದಿದ್ದರೂ, ತಂಡವು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ವಿಫಲವಾಯಿತು.

2011 ರಲ್ಲಿ ಆಟಗಾರನಾಗಿ ರಾಜಸ್ತಾನ ರಾಯಲ್ಸ್ ತಂಡ ಸೇರಿದ್ದ ಅವರು 2012 ಮತ್ತು 2013 ರಲ್ಲಿ ತಂಡದ ನಾಯಕತ್ವ ವಹಿಸಿದರು, ನಂತರ 2014 ಮತ್ತು 2015 ರಲ್ಲಿ ತಂಡದ ನಿರ್ದೇಶಕ ಮತ್ತು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದರು. 2024 ರಲ್ಲಿ ಮುಖ್ಯ ಕೋಚ್ ಆಗಿ ಮರಳಿದಾಗ, ತಂಡದ ಪ್ರದರ್ಶನ ಮತ್ತು ಸಂಸ್ಕೃತಿ ಎರಡನ್ನೂ ಬಲಪಡಿಸಿ ಪ್ರಶಂಸೆ ಗಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com