

ಬಾಲಿವುಡ್ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಮುಂದೂಡಿದ ಬಳಿಕ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಇನ್ಸಾಟಾಗ್ರಾಮ್ ನಲ್ಲಿ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ.
ನವೆಂಬರ್ 23 ರಂದು ಅವರಿಬ್ಬರ ವಿವಾಹದ ದಿನದಂದು ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅನಾರೋಗ್ಯದಿಂದ ಸಾಂಗ್ಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ವಿವಾಹ ಮುಂದೂಲ್ಪಟ್ಟಿತ್ತು. ಮಾರನೇ ದಿನ ಮುಚ್ಚಲ್ ಕೂಡಾ ಆಸ್ಪತ್ರೆ ಸೇರಿದ್ದರು.
ಇಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಆದರೆ, ಹೊಸ ಮದುವೆ ದಿನಾಂಕವನ್ನು ಇಲ್ಲಿಯವರೆಗೂ ಘೋಷಿಸಿಲ್ಲ.
ಈ ಮಧ್ಯೆ ಸ್ಮೃತಿ ಮಂಧಾನ ಶುಕ್ರವಾರ ಇನ್ಸಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಪ್ರಮುಖ ಟೂತ್‌ಪೇಸ್ಟ್ ಬ್ರ್ಯಾಂಡ್‌ವೊಂದರ ಜಾಹೀರಾತು ಪ್ರಚಾರವಾಗಿದೆ. ಆದರೆ, ಈ ವೀಡಿಯೋದಲ್ಲಿ ಮಂಧಾನ ಕೈ ಬೆರಳಿನಲ್ಲಿ ಉಂಗುರ ಇಲ್ಲದಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಜಾಹೀರಾತನ್ನು ನಿಶ್ಚಿತಾರ್ಥ ನಡೆಯುವ ಮೊದಲು ಚಿತ್ರೀಕರಿಸಲಾಗಿದೆಯೇ ಎಂಬುದು ತಿಳಿದಿಲ್ಲ. ಆದಾಗ್ಯೂ, ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಮಧ್ಯೆ ಸ್ಮೃತಿ ಮಂಧಾನ ತನ್ನ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿನ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಇದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಎರಡೂ ಕುಟುಂಬಗಳ ಸದಸ್ಯರು ಆರೋಗ್ಯ ತುರ್ತು ಪರಿಸ್ಥಿತಿಗಳಿಂದಾಗಿ ವಿವಾಹ ಮುಂದೂಡಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಆದಾಗ್ಯೂ, ಪಲಾಶ್ ತಾಯಿ ಅಮಿತಾ, ಶೀಘ್ರದಲ್ಲಿಯೇ ಮದುವೆ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
Advertisement