

ಬಾಲಿವುಡ್ ಮ್ಯೂಸಿಕ್ ಕಂಪೂಸರ್ ಪಲಾಶ್ ಮುಚ್ಚಲ್ ಜೊತೆಗಿನ ಮದುವೆಗೆ ಇತಿಶ್ರೀ ಹಾಡಿದ ಕೆಲವೇ ದಿನಗಳಲ್ಲಿ ಭಾರತೀಯ ಕ್ರಿಕೆಟಿನ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ, ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಮಾಡಿರುವ ಫೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.
ಅಂದಹಾಗೆ, ನನಗೆ, ಶಾಂತತೆ ಮೌನವಲ್ಲ- ಇದು ನಿಯಂತ್ರಣ" ಎಂಬ ಶೀರ್ಷಿಕೆಯಡಿ ಮಾಡಿರುವ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಎಂಟು ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಪಡೆದಿದೆ. ಅಲ್ಲದೇ ಬ್ರೇಕ್ ಆಫ್ ಸುತ್ತ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಮಂಧಾನಾ ಈ ಹಿಂದೆ ಡಿಸೆಂಬರ್ 7 ರಂದು ಮದುವೆ ನಿಂತುಹೋದ ಬಗ್ಗೆ ಮೌನ ಮುರಿದಿದ್ದರು.
ವೈಯಕ್ತಿಕ ವಿಚಾರವನ್ನು ಮರೆಯಲು ಪ್ರಯತ್ನಿಸುತ್ತಿರುವುದಾಗಿ ತನ್ನ ನಿರ್ಧಾರವನ್ನು ಗೌರವಿಸುವಂತೆ ಅಭಿಮಾನಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದರು. ಕಳೆದ ತಿಂಗಳು ನಡೆಯಬೇಕಿದ್ದ ಹೈಪ್ರೋಫೈಲ್ ಮದುವೆ ರದ್ದಾದ ಕೆಲ ವಾರಗಳ ನಂತರ ಸ್ಮೃತಿ ಮಂಧಾನ ಈ ಹೇಳಿಕೆ ನೀಡಿದ್ದರು.
Advertisement