RCB ಮಾಜಿ ನಾಯಕ Faf du Plessis ಅದ್ಭುತ ಡೈವಿಂಗ್ ಕ್ಯಾಚ್ ಕಂಡು ಪ್ರೇಕ್ಷಕರು ದಂಗು: video viral
ನವದೆಹಲಿ: RCB ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಅವರು ವೃತ್ತಿ ಜೀವನದ ಅತ್ಯುತ್ತಮ ಫೀಲ್ಡಿಂಗ್ ಗಾಗಿ ಸುದ್ದಿಯಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ T20 ಲೀಗ್ ಪಂದ್ಯದಲ್ಲಿ ಜೋಹಾನ್ಸ್ ಬರ್ಗ್ ತಂಡದ ಪರ ಆಡಿರುವ ಫಾಪ್ಜ್ ಡುಪ್ಲೆಸಿಸ್ ಅಸಾಧ್ಯವಾಗಿದ್ದ ಕ್ಯಾಚ್ ನ್ನು ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ರಭಸವಾಗಿ ಗಾಳಿಯಲ್ಲಿ ಬಂದ ಚಂಡನ್ನು ಮಿಂಚಿನ ವೇಗದಲ್ಲಿ ಜಿಗಿದು ಹಿಡಿದು, ಬ್ಯಾಟ್ಮಸ್ಮನ್ ನ್ನು ಔಟ್ ಮಾಡಿದ್ದಾರೆ. ಫಾಫ್ ಡುಪ್ಲೆಸಿಸ್ ಅವರ ಕ್ಯಾಚ್ ಕಂಡು ಕ್ರೀಡಾಭಿಮಾನಿಗಳಷ್ಟೇ ಅಲ್ಲದೇ ಸ್ವತಃ ಕ್ರೀಡಾಪಟುಗಳೂ ಸಹ ದಂಗಾಗಿದ್ದಾರೆ.
ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಬ್ಯಾಟ್ಸ್‌ಮನ್ ಬೆಡ್ಡಿಂಗ್‌ಹ್ಯಾಮ್ ಇಮ್ರಾನ್ ತಾಹಿರ್ ಅವರ ಬೌಲಿಂಗ್‌ನಲ್ಲಿ ಮಿಡ್-ಆಫ್ ಕಡೆಗೆ ಉತ್ತಮ ಹೊಡೆತಕ್ಕೆ ಮುಂದಾದರು. ಆದಾಗ್ಯೂ, ಡು ಪ್ಲೆಸಿಸ್ ಗಮನಾರ್ಹ ಫೀಲ್ಡಿಂಗ್ ಪ್ರದರ್ಶಿಸಿದ್ದು, ಗಾಳಿಯಲ್ಲಿ ಮೇಲಕ್ಕೆ ಜಿಗಿದು ಎರಡೂ ಕೈಗಳಿಂದ ಚೆಂಡನ್ನು ಹಿಡಿದರು. ಈ ಅದ್ಭುತ ಪ್ರಯತ್ನ ಕಂಡು ಬ್ಯಾಟ್ಸ್‌ಮನ್ ಮಾತ್ರವಲ್ಲದೆ ಇಡೀ ಕ್ರೀಡಾಂಗಣ ಸ್ತಬ್ಧವಾಗಿತ್ತು.
40 ವರ್ಷ ವಯಸ್ಸಿನ ಡು ಪ್ಲೆಸಿಸ್ ತಮ್ಮ ಅತ್ಯುತ್ತಮ ಫೀಲ್ಡಿಂಗ್ ಸಾಮರ್ಥ್ಯ ಪ್ರದರ್ಶಿಸುವುದನ್ನು ಮುಂದುವರೆಸಿದ್ದಾರೆ. ಇತ್ತೀಚೆಗೆ, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಅನುಭವಿ ಕ್ರಿಕೆಟಿಗರನ್ನು ಡೆಲ್ಲಿ ಕ್ಯಾಪಿಟಲ್ಸ್ ಇತ್ತೀಚಿನ ಮೆಗಾ ಹರಾಜಿನಲ್ಲಿ ₹2 ಕೋಟಿಗೆ ಖರೀದಿಸಿದೆ.