Champions Trophy 2025: ಬ್ರಾಂಡ್ ಅಂಬಾಸಿಡರ್ ಶಿಖರ್ ಧವನ್ ಪಕ್ಕ ಕುಳಿತಿದ್ದ ಲೇಡಿ ಯಾರು?

ಚಾಂಪಿಯನ್ಸ್ ಟ್ರೋಫಿ 2025 ರ ಬ್ರಾಂಡ್ ಅಂಬಾಸಿಡರ್ ಆಗಿರುವ ಧವನ್ ವಿಐಪಿ ಬಾಕ್ಸ್‌ನಲ್ಲಿ ಆ ಮಹಿಳೆ ಜೊತೆಗೆ ಆರಾಮವಾಗಿ ಕುಳಿತಿದ್ದಾರೆ.
Shikhar Dhawan was spotted sitting beside a pretty lady
ಮಹಿಳೆಯನ್ನು ನೋಡುತ್ತಿರುವ ಶಿಖರ್ ಧವನ್
Updated on

ನವದೆಹಲಿ: ಗುರುವಾರ ದುಬೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಭಾರತದ ಆರಂಭಿಕ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಶಿಖರ್ ಧವನ್ ಸುಂದರ ಮಹಿಳೆಯ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ.

ಚಾಂಪಿಯನ್ಸ್ ಟ್ರೋಫಿ 2025 ರ ಬ್ರಾಂಡ್ ಅಂಬಾಸಿಡರ್ ಆಗಿರುವ ಧವನ್ ವಿಐಪಿ ಬಾಕ್ಸ್‌ನಲ್ಲಿ ಆ ಮಹಿಳೆ ಜೊತೆಗೆ ಆರಾಮವಾಗಿ ಕುಳಿತಿದ್ದಾರೆ. ಇದು ನೆಟ್ಟಿಗರಲ್ಲಿ ಒಂದು ಬಗೆಯ ಕುತೂಹಲ ಮೂಡಿಸಿದ್ದು, ಯಾರಿದು ಮಹಿಳೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಈ ಕುರಿತು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಕೆಲ ನೆಟ್ಟಿಗರು ಇನ್‌ಸ್ಟಾಗ್ರಾಮ್‌ನಲ್ಲಿ ಧವನ್‌ನನ್ನು ಫಾಲೋ ಮಾಡುವ ಸೋಫಿ ಎಂದು ಹೇಳುತ್ತಿದ್ದಾರೆ. ಪಂದ್ಯದ ವೇಳೆ ಓವರ್‌ಗಳ ನಡುವೆ ಧ್ವನಿವರ್ಧಕದಲ್ಲಿ ಬರುತ್ತಿದ್ದ ಪಂಜಾಬಿ ಹಾಡಿಗೆ 'ಸೋಫಿ' ಮತ್ತು ಶಿಖರ್ ಒಟ್ಟಿಗೆ ತಲೆಯಾಡಿಸಿರುವುದು ಕಂಡುಬಂದಿದೆ.

ಇಬ್ಬರ ನಡುವೆ ಪ್ರಣಯದ ಯಾವುದೇ ದೃಶ್ಯಗಳು ನಡೆದಿಲ್ಲ. ಆದರೆ ಶಿಖರ್ ಅವರ ನೋಟವು ಖಂಡಿತವಾಗಿಯೂ ಸಂಚಲನವನ್ನು ಸೃಷ್ಟಿಸಿದೆ. ವಿವಾಹವಾದ 8 ವರ್ಷಗಳ ನಂತರ ಶಿಖರ್ ಧವನ್ ಹಾಗೂ ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ ಪಡೆದುಕೊಂಡಿದ್ದರು.

Shikhar Dhawan was spotted sitting beside a pretty lady
ವಿವಾಹವಾದ 8 ವರ್ಷ ನಂತರ ಭಾರತೀಯ ಕ್ರಿಕೆಟರ್ ಶಿಖರ್ ಧವನ್, ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com