
ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರೋಚಿತ ಗೆಲುವು ಸಾಧಿಸಿದೆ. ಅಫ್ಘಾನ್ 8 ರನ್ ಗಳಿಂದ ಗೆಲುವು ಸಾಧಿಸಿದ್ದು ಇದು ಟೂರ್ನಿಯಲ್ಲಿ ಅವರ ಮೊದಲ ಗೆಲುವಾಗಿದೆ.
ಚಾಂಪಿಯನ್ಸ್ ಟ್ರೋಫಿಯ ಎಂಟನೇ ಪಂದ್ಯವು ಲಾಹೋರ್‌ನಲ್ಲಿ ಬಿ ಗುಂಪಿನ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಶಾಹೀದಿ 40 ಮತ್ತು ಅಜ್ಮತುಲ್ಲಾ ಒಮರ್ಜೈ 41 ರನ್ ಬಾರಿಸಿದರೆ ಇಬ್ರಾಹಿಂ ಝದ್ರಾನ್ 177 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನಿಂದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 325 ರನ್ ಗಳಿಸಿತು. ಈ ಅವಧಿಯಲ್ಲಿ ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಗರಿಷ್ಠ ಮೂರು ವಿಕೆಟ್ ಪಡೆದರೆ, ಲಿಯಾಮ್ ಲಿವಿಂಗ್‌ಸ್ಟೋನ್ ಎರಡು ವಿಕೆಟ್ ಪಡೆದರು. ಅದೇ ಸಮಯದಲ್ಲಿ, ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ತಲಾ ಒಂದು ಯಶಸ್ಸನ್ನು ಪಡೆದರು.
ಆಫ್ಘಾನ್ ನೀಡಿದ 326 ರನ್ ಗಳ ಗುರಿ ಬೆನ್ನಟ್ಟಿ ಇಂಗ್ಲೆಂಡ್ ತಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ 317 ರನ್ ಗಳಿಗೆ ಆಲೌಟ್ ಆಗುವ ಮೂಲಕ 8 ರನ್ ಗಳಿಂದ ಸೋಲು ಕಂಡಿದೆ. ಇಂಗ್ಲೆಂಡ್ ಪರ ಜೋ ರೂಟ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದು 120 ರನ್ ಪೇರಿಸಿದರು. ಜೋಸ್ ಬಟ್ಲರ್ 38 ರನ್ ಪೇರಿಸಿದರು. ಆಫ್ಘಾನ್ ಪರ ಅಜ್ಮತುಲ್ಲಾ ಒಮರ್ಜೈ 5 ವಿಕೆಟ್ ಪಡದರೇ ಮೊಹಮ್ಮದ್ ನಬಿ 2 ವಿಕೆಟ್ ಪಡೆದಿದ್ದಾರೆ.
Advertisement