
ದುಬೈ: ಯಾವುದೇ ಭಾರತೀಯ ಆಟಗಾರರು ಇಲ್ಲದ 2024ರ ಪುರುಷರ ಏಕದಿನ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಶುಕ್ರವಾರ ಪ್ರಕಟಿಸಿದೆ.
ಶ್ರೀಲಂಕಾದಿಂದ ನಾಲ್ವರು ಆಟಗಾರರು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಮೂವರು, ವೆಸ್ಟ್ ಇಂಡೀಸ್ ನಿಂದ ಒಬ್ಬರು ಆಟಗಾರರು ಇರುವ ಸ್ಟಾರ್ ತಂಡವನ್ನು ಎಐಸಿಸಿ ಪ್ರಕಟಿಸಿದೆ. ಭಾರತ ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳಲ್ಲಿ ಎರಡರಲ್ಲಿ ಸೋತಿತ್ತು, ಮೂರನೇ ಪಂದ್ಯ ಟೈ ಆಗಿತ್ತು.
ಶ್ರೀಲಂಕಾ ತಂಡದ ಕ್ಯಾಪ್ಟನ್ ಚರಿತ ಅಸಲಂಕ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. 2024ರಲ್ಲಿ16 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡ ಚರಿತ, 50.2 ರ ಸರಾಸರಿಯಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳೊಂದಿಗೆ 605 ರನ್ ಗಳಿಸಿದ್ದರು.
2024ರಲ್ಲಿ ಶ್ರೀಲಂಕಾ 18 ಪಂದ್ಯಗಳನ್ನಾಡಿದ್ದು, 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೂ ಪಾಕಿಸ್ತಾನ ಆಡಿದ 9 ಏಕದಿನ ಪಂದ್ಯಗಳಲ್ಲಿ ಏಳು ಗೆಲುವು ಸಾಧಿಸಿದರೆ, ಅಪ್ಘಾನಿಸ್ತಾನ 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.
2023 ರಲ್ಲಿ ತನ್ನ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದ ವೆಸ್ಟ್ ಇಂಡಿಯನ್ ಶೆರ್ಫೇನ್ ರುದರ್ಫೋರ್ಡ್, 106.2 ರ ಬೆರಗುಗೊಳಿಸುವ ಸರಾಸರಿಯಲ್ಲಿ ಒಂಬತ್ತು ಪಂದ್ಯಗಳಿಂದ 425 ರನ್ ಗಳಿಸಿದ ಗಳಿಸಿದ ಏಷ್ಯಾಯೇತರ ಏಕೈಕ ಆಟಗಾರರಾಗಿದ್ದಾರೆ.
Advertisement