
ಲಾರ್ಡ್ಸ್: ಇಂಗ್ಲೆಂಡ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ- ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನಾಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿದೆ.
ಭಾರತೀಯ ಬೌಲರ್ ಗಳು ಮೊದಲ ದಿನದಂದೇ ಇಂಗ್ಲೆಂಡ್ ಆಟಗಾರರ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಭಾರತದ ಬಿಗಿ ಬೌಲಿಂಗ್ ನ ನಡುವೆಯೂ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ (88*) ನೆರವಾಗಿ ನಿಂತಿದ್ದು, ತಂಡ ಉತ್ತಮ ಮೊತ್ತ ಗಳಿಸಲು ಸಹಕಾರಿಯಾಯಿತು.
ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ತಂಡ, 76 ಓವರ್‌ಗಳಲ್ಲಿ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡು 251 ರನ್ ಗಳಿಸಿದೆ.
ಆರಂಭಿಕ ಆಟಗಾರ ಜಾಕ್ ಕ್ರಾವ್ಲಿಮತ್ತು ಬೆನ್ ಡಕೆಟ್, ಭಾರತೀಯರ ಬೌಲಿಂಗ್ ದಾಳಿಗೆ ನಲುಗಿ ರನ್ ಗಳಿಸುವುದಕ್ಕೆ ಪರದಾಡಿದರು. 14ನೇ ಓವರ್‌ನಲ್ಲಿ ಬೆನ್ ಡಕೆಟ್ ಅವರ ವಿಕೆಟ್ ಗಳಿಸುವ ಮೂಲಕ ನಿತೀಶ್ ಭಾರತ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು.
ಈ ಬೆನ್ನಲ್ಲೇ ಅದೇ ಓವರ್‌ನಲ್ಲಿ ಜಾಕ್ ಕ್ರಾವ್ಲಿಅವರನ್ನು ಪೆವಿಲಿಯನ್‌ಗೆ ಕಳುಹಿಸಿದ ನಿತೀಶ್, ಆತಿಥೇಯ ತಂಡ ತೀವ್ರ ನಿರಾಶೆ ಎದುರಿಸುವಂತೆ ಮಾಡಿದರು ಪರಿಣಾಮ ಇಂಗ್ಲೆಂಡ್ ತಂಡ ಆರಂಭಿಕ ಆಘಾತದಿಂದ ತತ್ತರಿಸಿತು.
ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಗಳ ಬ್ಯಾಟಿಂಗ್ ತವರಿನ ಮೈದಾನದಲ್ಲಿ ಇಂಗ್ಲೆಂಡ್ ತಂಡದ ಅತ್ಯಂತ ನಿಧಾನಗತಿ ಬ್ಯಾಟಿಂಗ್ ಎಂಬ ಕುಖ್ಯಾತಿಗೂ ಗುರಿಯಾಯಿತು. ಮೂರನೇ ವಿಕೆಟ್‌ಗೆ ಜತೆಗೂಡಿದ ಒಲಿ ಪೋಪ್ ಮತ್ತು ಜೋ ರೂಟ್, ಎಚ್ಚರಿಕೆಯ ಬ್ಯಾಟಿಂಗ್ ಆಡುವ ಮೂಲಕ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.
ಈ ಮಧ್ಯೆ, 44 ರನ್ ಗಳಿಸಿ ಅರ್ಧ ಶತಕದತ್ತ ದಾಪುಗಾಲಿಟ್ಟಿದ್ದ ಪೋಪ್ ವಿಕೆಟ್ ಗಳಿಸುವ ಮೂಲಕ ರವೀಂದ್ರ ಜಡೇಜಾ ಭಾರತಕ್ಕೆ ಮಾರಕವಾಗಬಹುದಾಗಿದ್ದ ಜತೆಯಾಟವನ್ನು ಮುರಿದರು. ಪೋಪ್ ಜತೆ 109 ರನ್‌ಗಳ ಜತೆಯಾಟ ನಿರ್ವಹಿಸಿದ ರೂಟ್, ಅರ್ಧ ಶತಕ ಪೂರೈಸಿ ತಂಡದ ಹೋರಾಟಕ್ಕೆ ಬಲ ತುಂಬಿದರು. ಆದರೆ ಆತಿಥೇಯರ ಬ್ಯಾಟಿಂಗ್ ಬೆನ್ನಲುಬಾಗಿದ್ದ ಹ್ಯಾರಿ ಬ್ರೂಕ್‌ಗೆ ವೇಗಿ ಜಸ್‌ಪ್ರಿತ್ ಬುಮ್ರಾ ಪೆವಿಲಿಯನ್ ದಾರಿ ತೋರಿದರು. ಭಾರತ 2ನೇ ಟೆಸ್ಟ್ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ.
Advertisement