IPL 2025 Winners: ವಿನ್ನರ್, ರನ್ನರ್ ಅಪ್ ಸೇರಿದಂತೆ ಪ್ರಶಸ್ತಿ ಪುರಸ್ಕೃತರಿಗೆ ಸಿಕ್ಕ ನಗದು ಬಹುಮಾನವೆಷ್ಟು?

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ ಗಳ ಅಂತರದಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.
RCB Players
ಚಾಂಪಿಯನ್ ಆರ್ ಸಿಬಿ ಆಟಗಾರರು
Updated on

ಅಹಮದಾಬಾದ್: ಐಪಿಎಲ್ 2025ರ 18ನೇ ಆವೃತ್ತಿಯ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರೂ. 20 ಕೋಟಿ ನಗದು ಬಹುಮಾನ ದೊರೆತರೆ, ರನ್ನರ್ ಅಪ್ ಪಂಜಾಬ್ ಕಿಂಗ್ಸ್ ರೂ. 13 ಕೋಟಿ ಹಣವನ್ನು ಪಡೆಯಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ ಗಳ ಅಂತರದಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

ವಿಶ್ವದ ಅತಿದೊಡ್ಡ ಐಪಿಎಲ್ 2025 18 ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಡೈನಾಮಿಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಈ ಬಾರಿಯ ಅತ್ಯಂತ ಮೌಲ್ಯಯುತ ಆಟಗಾರ (Most Valuable Player) ಪ್ರಶಸ್ತಿಗೆ ಭಾಜನರಾದರೆ, ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಬ್ಯಾಟರ್ ಸಾಯಿ ಸುದರ್ಶನ್ ಉದಯೋನ್ಮುಖ ಆಟಗಾರ (Emerging Player) ನಾಗಿ ಹೊರಹೊಮ್ಮಿದರು.

ಫೈನಲ್ ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ಟಿ-20 ನಾಯಕ ಸೂರ್ಯ ಕುಮಾರ್ ಯಾದವ್ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಸ್ವೀಕರಿಸಿದರು. ಈ ಬಾರಿಯ ಟೂರ್ನಿಯಲ್ಲಿ ಅವರು 65.18 ರ ಸರಾಸರಿಯಲ್ಲಿ ಐದು ಅರ್ಧ ಶತಕಗಳೊಂದಿಗೆ 717 ರನ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಇದೇ ಮೊದಲ ಬಾರಿಗೆ ಆರಂಭಿಕರಲ್ಲದ ಆಟಗಾರನಾಗಿ 700 ರನ್ ಗಳಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಈ ಮಧ್ಯೆ ಸಾಯಿ ಸುದರ್ಶನ್ ಅತಿ ಹೆಚ್ಚು 759 ರನ್ ಗಳಿಸುವ ಮೂಲಕ ಆರಂಜ್ ಕ್ಯಾಪ್ ಮುಡಿಗೇರಿಸಿಕೊಂಡರೆ, ಪ್ರಸಿದ್ಧ್ ಕೃಷ್ಣ ಅತಿ ಹೆಚ್ಚು 25 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದರು.

ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:

ಈ ಬಾರಿಯ ಮೌಲ್ಯಯುತ ಆಟಗಾರ: ಸೂರ್ಯಕುಮಾರ್ ಯಾದವ್

ಆರೆಂಜ್ ಕ್ಯಾಪ್ ವಿಜೇತ: ಸಾಯಿ ಸುದರ್ಶನ್ (759 ರನ್)

ಅತ್ಯಂತ ಹೆಚ್ಚಿನ ಕ್ಯಾಚ್ ಪಡೆದ ಆಟಗಾರ: ಕಮಿಂದು ಮೆಂಡಿಸ್

ಪರ್ಪಲ್ ಕ್ಯಾಪ್ ವಿಜೇತ: ಪ್ರಸಿದ್ಧ್ ಕೃಷ್ಣ (25 ವಿಕೆಟ್)

ಫೇರ್‌ಪ್ಲೇ ಪ್ರಶಸ್ತಿ: ಚೆನ್ನೈ ಸೂಪರ್ ಕಿಂಗ್ಸ್

ಈ ಬಾರಿಯ ಉದಯೋನ್ಮುಖ ಆಟಗಾರ: ಸಾಯಿ ಸುದರ್ಶನ್

RCB Players
IPL 2025 Final: 'ನನ್ನ ಹೃದಯ, ನನ್ನ ಆತ್ಮ, ಈ ತಂಡಕ್ಕೆ ನನ್ನ ಯೌವನವನ್ನೇ ನೀಡಿದ್ದೇನೆ; RCB ಗೆಲುವಿನ ಬಳಿಕ Virat Kohli ಭಾವುಕ ನುಡಿ!

ಸಾಯಿ ಸುದರ್ಶನ್ ಅವರು ಉದಯೋನ್ಮುಖ ಆಟಗಾರ, ಹೆಚ್ಚು ಬೌಂಡರಿ ಬಾರಿಸಿದ ಆಟಗಾರ ಮತ್ತಿತರ ಪ್ರಶಸ್ತಿಗೆ ಭಾಜನರಾದರು. ಇವರೆಲ್ಲರೂ ತಲಾ ರೂ. 10 ಲಕ್ಷ ನಗದು ಬಹುಮಾನ ಸ್ವೀಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com