ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಭಾರತಕ್ಕೆ ಸೋಲು: ನಾಲ್ಕು ಕ್ಯಾಚ್ ಕೈಬಿಟ್ಟದ್ದು ಸೇರಿದಂತೆ ಪ್ರಮುಖ ಐದು ಕಾರಣಗಳು!

ಐದು ಶತಕಗಳ ಹೊರತಾಗಿಯೂ ಭಾರತ ಇಂಗ್ಲಿಷರ ಮುಂದೆ ಮುಂಡಿಯೂರಿದೆ. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
Shubman Gill
ನಾಯಕ ಶುಭ್ ಮನ್ ಗಿಲ್
Updated on

ಲೀಡ್ಸ್: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದು, ನಾಯಕ ಶುಭ್ ಮನ್ ಗಿಲ್ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ಐದು ಶತಕಗಳ ಹೊರತಾಗಿಯೂ ಭಾರತ ಇಂಗ್ಲಿಷರ ಮುಂದೆ ಮುಂಡಿಯೂರಿದೆ. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಭಾರತ ಸೋಲಿಗೆ ಪ್ರಮುಖ ಐದು ಕಾರಣಗಳು ಇಂತಿದೆ.

ಪ್ರಬಲ ಆರಂಭದ ಹೊರತಾಗಿಯೂ ಕೈ ಕೊಟ್ಟ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು: ಮೊದಲ ಇನ್ನಿಂಗ್ಸ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಉತ್ತಮವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ಶುಭ್‌ಮಾನ್ ಗಿಲ್ ಅವರಿಂದ ಒಂದು ಹಂತದಲ್ಲಿ ಭಾರತದ ಸ್ಕೋರ್ 3 ವಿಕೆಟ್ ನಷ್ಟಕ್ಕೆ ಆಗಿತ್ತು. ಆದರೆ ಅಲ್ಲಿಂದ ಕುಸಿತ ಆರಂಭವಾಯಿತು. ಕೇವಲ 41 ರನ್‌ಗಳಿಗೆ ತಮ್ಮ ಅಂತಿಮ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಸಂಭಾವ್ಯ 600 ರನ್‌ಗಳ ಮೊತ್ತವು 471 ಕ್ಕೆ ಕೊನೆಗೊಂಡಿತು.

ಇದು ಎರಡನೇ ಇನಿಂಗ್ಸ್‌ನಲ್ಲಿಯೂ ಇದು ಮುಂದುವೆರಿಯಿತು. ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಶತಕದಿಂದ ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿತ್ತು. ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್ ಗಳು ಕೈ ಕೊಟ್ಟರು. ಭಾರತ ಮತ್ತೆ ಕುಸಿದು 77 ರನ್ ಗಳೊಂದಿಗ 364 ರನ್ ಗಳಿಸಲಷ್ಟೇ ಶಕ್ತವಾಯಿತು.

ಅವಕಾಶ ಕೈ ಚೆಲ್ಲಿದ ಸಾಯಿ ಸುದರ್ಶನ್, ನಾಯರ್: ಚೊಚ್ಚಲ ಪಂದ್ಯವನ್ನಾಡಿದ ಸಾಯಿ ಸುದರ್ಶನ್ ಹಾಗೂ ಧೀರ್ಘ ವಿರಾಮದ ಬಳಿಕ ಮತ್ತೆ ಕಂಬ್ಯಾಕ್ ಮಾಡಿದ್ದ ಕರುಣ್ ನಾಯರ್, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಆರಂಭಿಕ ಮಧ್ಯಮ ಕ್ರಮಾಂಕದ ಬ್ಯಾಟರ್ ನಡುವೆ ತೀವ್ರ ವ್ಯತ್ಯಾಸವಿದೆ.

ಕಳಪೆ ಫೀಲ್ಡಿಂಗ್, ನಾಲ್ಕು ಕ್ಯಾಚ್ ಕೈ ಬಿಟ್ಟ ಯಶಸ್ವಿ ಜೈಸ್ವಾಲ್: ಭಾರತದ ಫೀಲ್ಡಿಂಗ್ ಎರಡೂ ಇನ್ನಿಂಗ್ಸ್‌ಗಳಲ್ಲಿ ತೀವ್ರ ಕಳಪೆಯಾಗಿತ್ತು. ಯಶಸ್ವಿ ಜೈಸ್ವಾಲ್‌ಗಿಂತ ಕೆಟ್ಟ ಫೀಲ್ಡಿಂಗ್ ಯಾರೂ ಮಾಡಿರಲಿಲ್ಲ. ಬೆನ್ ಡಕೆಟ್ 97 ರನ್ ಗಳಿಸಿದ್ದಾಗ ಒಂದು ನಿರ್ಣಾಯಕ ಕ್ಯಾಚ್ ಸೇರಿದಂತೆ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಜೀವದಾನ ಪಡೆದ ಡಕೆಟ್ 149 ರನ್ ಗಳಿಸಿದರು. ವಿಕೆಟ್‌ಕೀಪರ್ ರಿಷಬ್ ಪಂತ್ ಕೂಡ ನಿರ್ಣಾಯಕ ಹಂತದಲ್ಲಿ ಸ್ಟಂಪ್ ಮಾಡುವಲ್ಲಿ ಎಡವಿದರು. ಐದನೇ ದಿನ ಭಾರತವು ಇಂಗ್ಲೆಂಡ್‌ಗೆ ಹಲವಾರು ಜೀವದಾನ ನೀಡಿತು.

ವಿಕೆಟ್ ಪಡೆಯಲು ಹೆಣಗಾಡಿದ ಬೌಲರ್ ಗಳು: ಇಂಗ್ಲೆಂಡ್ ವಿಕೆಟ್ ಪಡೆಯಲು ಭಾರತದ ಬೌಲರ್ ಗಳಾದ ಬುಮ್ರಾ, ಸಿರಾಜ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ ಮತ್ತು ಜಡೇಜಾ ಹೆಣಗಾಡಿದರು. ಉತ್ತಮ ಹೊಂದಾಣಿಕೆ ಇರಲಿಲ್ಲ. ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಸಿರಾಜ್ ಕೂಡ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್ ನಲ್ಲಿ ಶಾರ್ದೂಲ್ ಸೇರ್ಪಡೆಯು ಕೆಲವು ಪ್ರಯೋಜನ ನೀಡಿತು. ಆದರೆ ಅವರ ಬೌಲಿಂಗ್‌ ಸರಿಯಾಗಿರಲಿಲ್ಲ. ಪ್ರಸಿದ್ಧ್ ತುಕ್ಕು ಹಿಡಿದಂತೆ ಕಂಡರು, ಜಡೇಜಾ ಅವರಿಂದ ಪರಿಣಾಮಕಾರಿ ಬೌಲಿಂಗ್ ಬರಲಿಲ್ಲ.

ಜಸ್ಪ್ರೀತ್ ಬುಮ್ರಾ ಮೇಲೆ ಅತಿಯಾದ ಅವಲಂಬನೆ: ಮೊದಲ ಇನ್ನಿಂಗ್ಸ್‌ನಲ್ಲಿ ರಿವರ್ಸ್ ಸ್ವಿಂಗ್, ನಿಖರ ದಾಳಿ ಮೂಲಕ ಅವರ 83 ರನ್ ಗಳಿಗೆ ಐದು ವಿಕೆಟ್ ಪಡೆದಿದ್ದ ಜಸ್ಪ್ರೀತ್ ಬೂಮ್ರಾ ಅವರ ಮೇಲೆ ತಂಡ ಹೆಚ್ಚಾಗಿಅವಲಂಬನೆಯಾದಂತೆ ಕಂಡುಬಂತು. ವಿಶೇಷವಾಗಿ ಡಕೆಟ್ ಮತ್ತು ಝಾಕ್ ಕ್ರಾಲಿ ಅವರಂತಹ ವಿಕೆಟ್ ಪಡೆದ ಮೇಲೆ ಅವರಿಗೆ ಹೆಚ್ಚಿನ ಒತ್ತಡ ಇತ್ತು. ಆದರೆ, ಎರಡನೇ ಇನ್ಸಿಂಗ್ಸ್ ನಲ್ಲಿ ವಿಕೆಟ್ ಪಡೆಯುವಲ್ಲಿ ಅವರ ವಿಫಲರಾದರು.

Shubman Gill
IND vs Eng 1st Test: ಗಿಲ್ ಗೆ ಕೈಕೊಟ್ಟ ಅದೃಷ್ಟ; ಐದು ಶತಕ ಗಳಿಸಿಯೂ ಭಾರತಕ್ಕೆ ಸೋಲು; 148 ವರ್ಷಗಳಲ್ಲಿ ಇದೇ ಮೊದಲು!

ಇಂಗ್ಲೆಂಡ್ ಅತ್ಯುತ್ತಮ ಪ್ರದರ್ಶನ: ಭಾರತ ಒಂದು ಹಂತದಲ್ಲಿ ಹೆಚ್ಚಿನ ರನ್ ಗಳಿಸಿದರೂ ಇಂಗ್ಲೆಂಡ್ ಎಂದಿಗೂ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಅವರು ಶಾಂತ, ಲೆಕ್ಕಾಚಾರ ಮತ್ತು ನಿರ್ಭೀತವಾಗಿತ್ತು. ಅವರು ದುಡುಕಿನವರಾಗಿರಲಿಲ್ಲ, ಆದರೆ ಅವರು ಹೆಚ್ಚು ಜಾಗರೂಕರಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ವೈಫಲ್ಯದ ನಂತರ ಡಕೆಟ್‌ನ 149 ಮತ್ತು ಕ್ರಾಲಿ 65 ರನ್‌ಗಳ ನೆರವಿನಿಂದ ಭಾರತ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com