'ನೀನು ಇಲ್ಲಿಂದ ಆಚೆ ಹೋಗು': ಮೈದಾನದಲ್ಲಿ ದಿನೇಶ್ ಕಾರ್ತಿಕ್‌ಗೆ ರೋಹಿತ್ ಶರ್ಮಾ ಗದರಿದ್ದೇಕೆ? ವಿಡಿಯೋ!

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಸತತ 10ನೇ ಬಾರಿಗೆ ಏಕದಿನ ಪಂದ್ಯದಲ್ಲಿ ಟಾಸ್ ಸೋತರು. ಈ ಪ್ರವೃತ್ತಿ 2023ರ ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನೊಂದಿಗೆ ಪ್ರಾರಂಭವಾಗಿದ್ದು ಅಂದಿನಿಂದ ಮುಂದುವರೆದಿದೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ
Updated on

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಟಾಸ್ ಸಮಯದಲ್ಲಿ ಅವರ ದುರಾದೃಷ್ಟ ನಿಲ್ಲುತ್ತಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಸತತ 10ನೇ ಬಾರಿಗೆ ಏಕದಿನ ಪಂದ್ಯದಲ್ಲಿ ಟಾಸ್ ಸೋತರು. ಈ ಪ್ರವೃತ್ತಿ 2023ರ ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನೊಂದಿಗೆ ಪ್ರಾರಂಭವಾಗಿದ್ದು ಅಂದಿನಿಂದ ಮುಂದುವರೆದಿದೆ.

ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಭಾರತದ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ರೋಹಿತ್ ಟಾಸ್ ಗೆಲ್ಲುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಮತ್ತೊಮ್ಮೆ ಟಾಸ್ ಸೋತರು. ಆದರೆ, ಟಾಸ್ ಸಮಯದಲ್ಲಿ ನಡೆದ ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಟಾಸ್ ಸೋತ ನಂತರ ರೋಹಿತ್ ಅವರ ಪ್ರತಿಕ್ರಿಯೆ ಕಾಣಬಹುದು.

ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ದಿನೇಶ್ ಕಾರ್ತಿಕ್ ಕೂಡ ರೋಹಿತ್ ಅವರಿಂದ ಸ್ವಲ್ಪ ದೂರದಲ್ಲಿ ನಿಂತಿದ್ದರು. ಟಾಸ್ ಸೋತ ನಂತರ, ರೋಹಿತ್ ದಿನೇಶ್ ಕಾರ್ತಿಕ್ ಅವರನ್ನು ಗದರಿಸುತ್ತಿರುವುದು ಕಂಡುಬಂದಿತು. ನೀವು ಅಪಶಕುನ ಇಲ್ಲಿಂದ ಹೊರಡು" ಎಂದು ಅವರು ಕ್ಯಾಮೆರಾದಲ್ಲಿ ಹೇಳುತ್ತಿರುವುದು ಕೇಳಿಸಿತು. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ.

ರೋಹಿತ್ ಶರ್ಮಾ
'ಶತಕ ವೀರ' ವಿರಾಟ್ ಕೊಹ್ಲಿ ಬಾಬರ್ ಮುಂದೆ 'ZERO': ವಿಷಕಾರಿದ ಪಾಕಿಸ್ತಾನದ ಮಾಜಿ ಕೋಚ್; ನೆಟ್ಟಿಗರಿಂದ ತರಾಟೆ

ದುಬೈನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 249 ರನ್ ಕಲೆ ಹಾಕಿ ನ್ಯೂಜಿಲೆಂಡ್ ಗೆ ಗೆಲ್ಲಲು 250 ರನ್ ಗುರಿ ನೀಡಿತ್ತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ದುಬೈನ ಸ್ಲೋ ಟ್ರಾಕ್ ಪಿಚ್ ನಲ್ಲಿ ರನ್ ಗಳಿಸಲು ಪರದಾಡಿತು. 45.3 ಓವರ್ ನಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 44 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com